ಕಾಶ್ಮೀರಕ್ಕೆ ದಕ್ಷಿಣ ಸ್ಟಾರ್ ರೈಲು ಸಂಚಾರ

ನವದೆಹಲಿ,ಏ.೮ ಭಾರತೀಯ ರೈಲ್ವೆಯ ‘ಭಾರತ್ ಗೌರವ್’ ಯೋಜನೆಯಡಿಯಲ್ಲಿ ” ದಕ್ಷಿಣ ಸ್ಟಾರ್ ರೈಲು” ಕಾಶ್ಮೀರ ಕಣಿವೆಗೆ ಓಡಾಟ ಪ್ರಾರಂಭಿಸಿದೆ.
ಮೇ.೧೧ ರಂದು ಕೊಯಂಬತ್ತೂರಿನಿಂದ ಹೊರಡುವ ರೈಲು ಬೆಂಗಳೂರಿನ ಯಲಹಂಕ ಮೂಲಕ ಹಾದು ಹೋಗುತ್ತದೆ. ಈ ಬೇಸಿಗೆ ರಜೆಗೆ ವಿಶೇಷ ರೈಲಿನ ಟಿಕೆಟ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಭಾರತ್ ಗೌರವ್ ಅಡಿಯಲ್ಲಿ, ಪ್ರವಾಸೋದ್ಯಮ ಪ್ಯಾಕೇಜ್‌ಗಳನ್ನು ಉತ್ತೇಜಿಸಲು ವಿಷಯಾಧಾರಿತ ವಲಯಗಳನ್ನು ನಡೆಸಲು ಖಾಸಗಿ ನಿರ್ವಾಹಕರು ಅಥವಾ ಸೇವಾ ಪೂರೈಕೆದಾರರಿಗೆ ಭಾರತೀಯ ರೈಲುಗಳನ್ನು ಗುತ್ತಿಗೆ ನೀಡಲು ರೈಲ್ವೆ ಅವಕಾಶ ನೀಡಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಕೊಯಂಬತ್ತೂರು ಮೂಲದ ಸೌತ್ ಸ್ಟಾರ್ ರೈಲ್, ಎಂ ಮತ್ತು ಸಿ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡಿ ಅಡಿಗಲ್ಲಿ ದಕ್ಷಿಣ ಸ್ಟಾರ್ ರೈಲ್ ನ ಕಾಶ್ಮೀರ ಪ್ಯಾಕೇಜ್ ಮೇ ೧೧, ರಂದು ಪ್ರಾರಂಭವಾಗುತ್ತದೆ. ಈ ರೈಲು ಕೊಯಂಬತ್ತೂರನಿಂದ ಆರಂಭವಾಗುತ್ತದೆ. ಅಂತಿಮ ಗಮ್ಯಸ್ಥಾನ ತಲುಪುವ ಮೊದಲು, ಪ್ರಯಾಣಿಕರು: ಈರೋಡ್, ಸೇಲಂ, ಧರ್ಮಪುರಿ, ಹೊಸೂರು, ಯಲಹಂಕ, ಪೆರಂಬೂರು, ವಿಜಯವಾಡ, ಮತ್ತು ವಾರಂಗಲ್ ನಲ್ಲಿ ನಿಲುಗಡೆಗೆ ಅವಕಾಶ ಮಾಡಿದೆ.

ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ, ಸರ್ಕಾರಿ ನೌಕರರಿಗೆ ಎಲ್ ಟಿಸಿ ಸೌಲಭ್ಯ, ಎಸಿ ಮತ್ತು ಎಸಿ ಅಲ್ಲದ ಎಲ್ಲಾ ವರ್ಗದ ಬೋಗಿಗಳು ಸೇರಿದಂತೆ ಈ ರೈಲು ಸೇವೆಯಲ್ಲಿ ಪ್ರವಾಸಿಗರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದೆ

ಪ್ರಯಾಣದ ಸೇರಿದಂತೆ ಮಾಹಿತಿಗೆ ತಿತಿತಿ.ಡಿಚಿiಟಣouಡಿism.ಛಿom ಅಥವಾ ದೂರವಾಣಿ ೯೦೧೫೫ ೦೦೨೦೦ ಸಂಪರ್ಕಿಸಬಹುದೆಂದು ಭಾರತೀಯ ರೈಲ್ವೆ ಸಚಿವಾಲಯ ತಿಳಿಸಿದೆ