ಕಾಶಿ ಪೀಠದಿಂದ ಕೋವಿಡ್‍ಕೇರ್ ಸೆಂಟರ್

ಧಾರವಾಡ ಮೇ.4-: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜಗದ್ಗುರು ಪೀಠದ ವತಿಯಿಂದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆ ಮಂಗಳವೇಡಾ ನಗರದಲ್ಲಿಯ ಕಾಶಿವಿಶ್ವೇಶ್ವರ ಸಾಂಸ್ಕøತಿಕ ಭವನದಲ್ಲಿ ಕರೊನಾ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.
ಶ್ರೀಕಾಶಿ ಜಗದ್ಗುರು ಪೀಠದಿಂದ ಸೋಲಾಪುರ ಜಿಲ್ಲೆ ಮಂಗಳವೇಡಾ ನಗರದಲ್ಲಿ ನಿರ್ಮಾಣ ಮಾಡಿರುವ ಕಾಶಿವಿಶ್ವೇಶ್ವರ ಸಾಂಸ್ಕೃತಿಕ ಭವನದಲ್ಲಿ4 ಸಾವಿರಚದುರಡಿಯಊಟದ ಮನೆ ಮತ್ತು 10 ಸಾವಿರಚದರಡಿಯ ಸಾಂಸ್ಕೃತಿಕ ಭವನವಿದ್ದು, ಇದನ್ನು ಸರ್ವ ಸಮಾಜಗಳ ವಿವಾಹ ಹಾಗೂ ಇತರೇ ಕಾರ್ಯಕ್ರಮಗಳಿಗೆ ನೀಡಲಾಗುತ್ತಿತ್ತು.
ಕಳೆದ ವರ್ಷ (2020) ಕರೋನಾ ಮಹಾಮಾರಿಯು ಮಹಾರಾಷ್ಟ್ರದಲ್ಲಿಉಲ್ಬಣ ಸ್ಥಿತಿಗೆ ತಲುಪಿದಾಗ ಸೋಲಾಪುರ ಸಂಸದರಾದಡಾ. ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಸೂಚನೆಯಂತೆ ಮತ್ತು ಸೋಲಾಪುರ ಜಿಲ್ಲಾಧಿಕಾರಿ ಮಿಲಿಂದ ಶಂಬರಕರ ಅಪೇಕ್ಷೆ ಮೇರೆಗೆ7 ತಿಂಗಳು ಕಾಲ ಶ್ರೀಕಾಶಿವಿಶ್ವೇಶ್ವರ ಸಾಂಸ್ಕೃತಿಕ ಭವನದ ಸಂಪೂರ್ಣ ಪರಿಸರವನ್ನುಕರೋನಾ ರೋಗಿಗಳ ಶುಶ್ರೂμÉಗೆ ಉಚಿತವಾಗಿ ಕೊಡಲಾಗಿತ್ತು.
ಪ್ರಸ್ತುತ ವರ್ಷವೂ ಸಹ ಕರೋನಾ ರೋಗದ ತೀವ್ರತೆಯನ್ನು ಮನಗಂಡಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸೋಲಾಪುರ ಸಂಸದರಾದ ಡಾ.ಜಯಸಿದ್ದೇಶ್ವರ ಶಿವಾಚಾರ್ಯರ ಮತ್ತು ಸೋಲಾಪುರ ಜಿಲ್ಲಾಧಿಕಾರಿಗಳ ಅಪೇಕ್ಷೆಯಂತೆ ಕೋವಿಡ್ ಪಾಸಿಟಿವ್ ರೋಗಿಗಳ ಶುಶ್ರೂμÉಗಾಗಿ ಮಂಗಳವೇಡಾದ ಕಾಶಿವಿಶ್ವೇಶ್ವರ ಸಾಂಸ್ಕೃತಿಕ ಭವನದ ಸಂಪೂರ್ಣ ಪರಿಸರವನ್ನುಉಚಿತವಾಗಿಕೊಡ ಮಾಡಿದ್ದಾರೆಂದು ಕಾಶಿ ಜಗದ್ಗುರು ಪೀಠದ ಕಾರ್ಯದರ್ಶಿ ಶಿವಾನಂದ ತಿಳಿಸಿದ್ದಾರೆ.