ಕಾಶಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ದೀಕ್ಷಾ ಕಾರ್ಯಕ್ರಮ

ಕಲಬುರಗಿ,ನ.23: ಕಾಶಿ ಜ್ಞಾನಸಿಂಹಾಸಮಾಧೀಶ್ವರ ಜಗದ್ಗುರು ಡಾ.ಚಂದ್ರಶೇಖರ ಶ್ರಿಗಳು 32ನೇ ಪೀಠಾರೋಹಣ, ಶ್ರೀಗಳ ಜನ್ಮದಿನಾಚರಣೆಯ ಅಮೃತ ಮಹೋತ್ಸವ ನಿಮಿತ್ಯ ನಡೆದ ಜ್ಞಾನಕುಂಭ ಸಮಾರೋಪ ಸಮಾರಂಭದ ನಿಮಿತ್ಯ ಕಾಶಿ ಜಂಗಮವಾಡಿ ಮಠದಲ್ಲಿ ಜಗದ್ಗುರು ಡಾ. ಚಂದ್ರಶೇಖರ್ ಶ್ರೀಗಳ ಸಾನಿಧ್ಯದಲ್ಲಿ ಇಷ್ಟಲಿಂಗ ದೀಕ್ಷೆ ಮತ್ತು ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ವಿವಿದೆಡೆಗಳಿಂದ ಬಂದ ಭಕ್ತರು ಪಾಲ್ಗೊಂಡರು.
ಬೆಳಿಗ್ಗೆ ಮಠದಲ್ಲಿ ಗಂಗಾ ನದಿಯಲ್ಲಿಯ ಜಲ ತಂದು ವೈದಿಕ ಪಂಡಿತರಿಂದ ವಿಶ್ವರಾಧ್ಯರ ಕತೃಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ, ಅಭಿಷೇಕ ನಡೆಯಿತು. ನಂತರ ಶ್ರೀಗಳು ಭಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿ, ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿಸಿ ಕೊಟ್ಟರು. ನಂತರ ಶ್ರೀಗಳು ಭಕ್ತರನ್ನುದ್ದೇಶಿಸಿ ಆಶಿರ್ವಾಚನ ನೀಡಿದರು.
ಲಿಂಗದೀಕ್ಷೆ ಪಡೆಯುವ ಅಧಿಕಾರ ಎಲ್ಲರಿಗಿದೆ. ದೇಶ, ಭಾಷೆ, ಧರ್ಮ, ವರ್ಣಗಳ ಬೇಧ ಇರುವದಿಲ್ಲ. ಮಾನವರು ದೀಕ್ಷೆಯನ್ನು ಪಡೆದು ಕೊಂಡು ಇದೇ ಜನ್ಮದಲ್ಲಿ ಮುಕ್ತಿ ಪಡೆಯಲು ಸಾಧ್ಯ. ಎಂದು ತಿಳಿಸಿದ ಸನ್ನಿಧಿಯವರು ಓರಿಸ್ಸಾ ರಾಜ್ಯದಿಂದ ಆಗಮಿಸಿದ ಭಕ್ತರಿಗೆ ಲಿಂಗದೀಕ್ಷೆ ನೀಡಿ, ತಮ್ಮ 75ನೇ ವರ್ಷದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ವಿಶ್ವದ ಸಮಸ್ತ ಮಾನವರಿಗೆ ಸಿದ್ಧಾಂತ ಶಿಖಾಮಣಿ ಪಾರಾಯಣ ಪದ್ದತಿ ಕಲಿಸುವ ಸಂಕಲ್ಪ ಮಾಡಲಾಗಿದೆ ಎಂದು ಅವರು ಹೇಳಿದರು.
ಇಂದಿನ ಡಿಜಿಟಲ್ ತಂತ್ರಜ್ಞಾನ ಉಪಯೋಗಸಿ ಮನೆಯಲ್ಲಿಯೇ ಕುಳಿತು ಇದನ್ನು ಸಾಧಿಸ ಬಹುದಾಗಿದೆ. ಆಗಸ್ಟ್ 2022 ರವರಗೆ ಆಸಕ್ತಿಯುಳ್ಳ ಭಕ್ತರಿಗೆ ಸಿದ್ಧಾಂತ ಶಿಖಾಮಣಿ ಪಾರಾಯಣ ಕಲಿಸಲಾಗುವದು. 20 ಭಾಷೆಗಳಲ್ಲಿ ಸಿದ್ಧಾಂತಶಿಖಾಮಣಿ ಪಾರಾಯಣ ತಯಾರಿದ್ದು, ದೇಶದ ಎಲ್ಲ ಭಾಷೆಯ ಭಕ್ತರಿಗೆ ಇದರ ಪ್ರಯೋಜನವಾಗಲಿದೆ. ಅವರವರ ಭಾಷೆಯಲ್ಲಿ ಡಿಜಿಟಲ್ ಗ್ರಂಥವನ್ನು ಅವರಿಗೆ ವ್ಹಾಟ್ಸ್‍ಪ್ ಮೂಲಕ ಲಿಂಕ ಕಳುಹಿಸಿ ಕಲಿಸಬಹುದಾಗಿದೆ. ಆಸಕ್ತಿವುಳ್ಳವರು 854992334, 9049439399ರ ಕ್ರಮಾಂಕಕ್ಕೆ ಸಂಪರ್ಕಿಸಿ ತಮ್ಮ ಹೆಸರುಗಳು ನೋಂದಾಯಿಸಿ ಕೊಂಡವರಿಗೆ ಡಿಜಿಟಲ್ ಬುಕ್ ಮತ್ತು ಲಿಂಕ ಕಳುಹಿಸಲಾಗುವದು ಹೆಚ್ಚಿನ ಭಕ್ತರು ಇದರ ಪ್ರಯೋಜನ ಪಡೆಯಬೇಕೆಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ್ ಶ್ರೀಗಳು ಆಮಂತ್ರಿಸಿದರು.
ದಹಿವಾಡಕರ್ ಮಠ ಬಾರ್ಶಿಯ ಗುರುಸಿದ್ಧ ಮಣಿಕಂಠ ಶ್ರೀಗಳು, ಅನಂತ ಜಂಗಮ, ಸಿದ್ರಾಮಪ್ಪ ಅಲಗೂಡಕರ್, ಪ್ರಭು ಜಂಗಮ, ಶಿವಾನಂದ್ ಸ್ವಾಮಿ ಹಿರೇಮಠ್, ಶಂಕರ್ ಸ್ವಾಮಿ, ವಾಸಂತಿ ಜಂಗಮ, ಜಯಶ್ರೀ ಜಂಗಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಪಂಡಿತ್ ಮಲ್ಲಿಕಾರ್ಜುನ ಶಾಸ್ತ್ರೀ, ಕುಮಾರ್ ಹಿರೇಮಠ್ ಅವರು ವೇದಘೋಷ ಮಾಡಿದರು.
ನವೆಂಬರ್ 24ರಂದು ಸಾಯಂಕಾಲ ಜಂಗಮವಾಡಿ ಮಠದಲ್ಲಿ ಜಗದ್ಗುರು ಡಾ. ಚಂದ್ರಶೇಖರ್ ಶ್ರೀಗಳ 32ನೇ ಪೀಠಾರೋಹಣದ ವರ್ಧಂತಿ ಮತ್ತು ಶ್ರೀಗಳ ಜನ್ಮದಿನದ ಅಮೃತ ಮಹೋತ್ಸವ ನಿಮಿತ್ಯ ಕಳೆದ ನಾಲ್ಕು ತಿಂಗಳಿಂದ ನಡೆದು ಬಂದ ಕಾರ್ಯಕ್ರಮಗಳ ಮುಕ್ತಾಯ. ಸಮಾಜ ಮತ್ತು ಧರ್ಮಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಭಕ್ತರಿಗೆ ಪ್ರಶಸ್ತಿ ವಿತರಣೆ ಸಮಾರಂಭ ಜರುಗಲಿದೆ. ಹಲವಾರು ಪೂಜ್ಯರು, ಗಣ್ಯರು ಭಾಗವಹಿಸಲಿದ್ದಾರೆ.