ಬೀದರ್: ಮಾ.28:ಸಮಾಜ ಸುಧಾರಕ, ವಿಶ್ವಕರ್ಮ ಸಮಾಜದ ನಾಯಕರಾಗಿದ್ದ ದಿ. ಕಾಶಿನಾಥರಾವ್ ವಿಶ್ವಕರ್ಮ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಸ್ಮರಣೀಯವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಇಲ್ಲಿ ಬಣ್ಣಿಸಿದರು.
ಇಲ್ಲಿನ ಶ್ರೀ ಮಹಾಕಾಳಿ ಸರಾಫ್ ಮತ್ತು ಸುವರ್ಣಕಾರರ ಸಂಘದ ಬೆಳ್ಳಿ ಹಬ್ಬ ಹಾಗೂ ದಿ. ಕಾಶಿನಾಥರಾವ್ ವಿಶ್ವಕರ್ಮ ಅವರ ಸ್ಮರಣಾಥ್ ನಡೆದ ಕಾರ್ಯಕ್ರಮದಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿದರು.
ವಿಶ್ವಕರ್ಮ ಸಮುದಾಯವು ಕೌಶಲ್ಯಕ್ಕೆ ಹೆಸರಾಗಿದೆ. ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳೆರಡರಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ನಗರದ ಸಿದ್ಧಾರೂಢ ಮಠದ ಪೂಜ್ಯ ಶಿವಕುಮಾರ ಸ್ವಾಮೀಜಿ, ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಂಎಲ್‍ಸಿ ರಘುನಾಥರಾವ್ ಮಲ್ಕಾಪುರೆ, ಬಿಜೆಪಿ ಮುಖಂಡರಾದ ನಂದಕಿಶೋರ ವರ್ಮಾ, ಈಶ್ವರಸಿಂಗ್ ಠಾಕೂರ್, ರಾಷ್ಟ್ರೀಯ ಬಸವದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಅನೀಲ ಬಿರಾದಾರ್, ಸಂತೋಷ ಪಂಚಾಳ್, ಸುಧಾಕರ ಪಂಚಾಳ್, ನಿತಿನ ಕರ್ಪುರೆ, ಬಸವರಾಜ ಭಂಗೂರೆ ಮತ್ತಿತರ ಗಣ್ಯರು ಇದ್ದರು.