ಕಾಶಿನಾಥ ಪಾಟೀಲ್‍ಗೆ ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿ

ಬೀದರ:ಫೆ.23:ಬಾಪು ಗ್ರಾಮೀನ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕಾಶಿನಾಥ ಪಾಟೀಲ್ ಅವರು ಸಾಮಾಜಿಕ, ಸುಸ್ಥೀರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಪರಿಗಣಿಸಿ, ನವದೇಹಲಿಯ ಕ್ರೈಟ್ಸ್ ಕ್ರಾಫ್ಟ್ ಪ್ರೊಡಕ್ಷನ್ ಸಂಸ್ಥೆಯವರಿಂದ ನವದೇಹಲಿಯಲ್ಲಿ ದಿನಾಂಕ 21-01-2023 ರಂದು ಹಮ್ಮಿಕೊಂಡ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕಾಶಿನಾಥ ಪಾಟೀಲ್‍ರಿಗೆ “ನ್ಯಾಷ್‍ನಲ್ ಎಕ್ಸ್‍ಲೆನ್ಸ್ ಅವಾರ್ಡ್ (ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿ)” ನೀಡಿ ಪುರಸ್ಕರಿಸಲಾಯಿತು.
ಇದು ಕರ್ನಾಟಕ ರಾಜ್ಯದಲ್ಲಿಯೇ ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯಕ್ಕೆ ಸಂದ ಅಭಿಮಾನದ ಸಂಗತಿಯಾಗಿದೆ ಎಂದು ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಸುನಿತಾ ಅಶೋಕ ಅವರು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.