ಕಾಶಿಗೆ 16 ನೆಯ ಸಲ ಪಾದಯಾತ್ರೆ

ಕಲಬುರಗಿ.ಜ.20: ಇವರು ಚಂದ್ರಕಾಂತ ದಿಗಂಬರ ತುವರ. ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮರತೂರ ಗ್ರಾಮದವರು. ಇವರು ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಮಹಾ ಪಾದಯಾತ್ರೆಯು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಶ್ರೀ ಶರಣಬಸವೇಶ್ವರ ಜನ್ಮಸ್ಥಳವಾದ ಅರಳಗುಂಡಗಿಯಿಂದ ಇದೇ ತಿಂಗಳ 31ರಂದು ಅರು ಜನರ ತಂಡದೊಂದಿಗೆ ಕಾಶಿ ಪಾದಯಾತ್ರೆ ಪ್ರಾರಂಭಿಸಲಿದ್ದಾರೆ.ಇದು ಅವರ ಹದಿನಾರನೇ ವರ್ಷದ ಪಾದಯಾತ್ರೆ.
ಸುಮಾರು ಹದಿನಾಲ್ಕು ತಿಂಗಳುಗಳ ಕಾಲ ಪಾದಯಾತ್ರೆ ಸಾಗಲಿದೆ ಅದು ಬರೀಗಾಲಿನಲಿಸುಮಾರು 64 ವರ್ಷ ವಯಸ್ಸಿನ ಚಂದ್ರಕಾಂತರವರು ಮರತೂರು ಮುತ್ಯಾ ಎಂದೇ ಚಿರಪರಿಚಿತರಾದವರು .ಮೂಲತಃ ಕೃಷಿಕರು.
ಚಂದ್ರಕಾಂತ ದಿಗಂಬರ ತುವರ ಅವರು 15 ವರ್ಷಗಳ ಕಾಲ ನಿರಂತರ ಕಾಶಿ ಪಾದಯಾತ್ರೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿಬೆಟ್ಟಕ್ಕೆ 11 ಬಾರಿ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಡರಪುರದ ವಿಠ್ಠಲ ಮಂದಿರಕ್ಕೆ 12 ಬಾರಿ, ಸ್ವಗ್ರಾಮವಾದ ಮರತೂರಿನಿಂದ ಅರಳಗುಂಡಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ 13 ಬಾರಿ,ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ 14 ವರ್ಷ ಪಾದಯಾತ್ರೆ ಕೈಗೊಂಡಿದ್ದಾರೆ.
ನಿರುದ್ಯೋಗ ನಿವಾರಣೆ, ಮಳೆ ಬೆಳೆ ಸಮೃದ್ಧಿ, ಹೆಣ್ಣು ಮಕ್ಕಳ ಶೋಷಣೆ ತಡೆ ಹೀಗೆ ಒಂದೊಂದು ವರ್ಷ ಒಂದೊಂದು ಸಂಕಲ್ಪದೊಂದಿಗೆ ಪಾದಯಾತ್ರೆ ಆರಂಭಿಸುತ್ತಾರೆ.
( ಚಂದ್ರಕಾಂತ ತುವರ ಸಂಪರ್ಕ ಸಂಖ್ಯೆ 9483965563)
_ ಗುರುರಾಜ.ಕೆ.ಪಟ್ಟಣಶೆಟ್ಟಿ