ಕಾವ್ಯ ಹೃದಯ ಭಾಷೆಯಾಗಬೇಕು : ಡಾ ವಿ. ಡಿ. ಐಹೊಳ್ಳಿ

ವಿಜಯಪುರ: ಎ.25:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಸವಜಯಂತಿ ನಿಮಿತ್ಯ ಏರ್ಪಡಿಸಿದ “ಕವಿಕಟ್ಟೆ” ಕವಿಗೋಷ್ಠಿ ಉದ್ಘಟಿಸಿ ಕವಿಗಳು ತಮ್ಮಲ್ಲಿ ಅನುಭಗಳು ಕುದ್ದು ಆವೆಯಾಗಿ ಹೊರಬರಬೇಕು ಅದರಿಂದ ಶ್ರೇಷ್ಠ ಕವನ ಹೊರಬರಲು ಸಾಧ್ಯ, ಇಂದು ಹತ್ತು ಜನ ಕವಿಗಳು ಕವನ ವಾಚನ ಮಾಡಿದ್ದು ಸಂತೋಷ ತಂದಿದೆ, ಕೆಲವು ಕವನಗಳು ಗೇಯತೆಯಿಂದ ಕೂಡಿದ್ದು ಇನ್ನೂ ವಿಶೇಷವಾಗಿತ್ತು, ಕವನಗಳು ಹೃದಯ ಭಾಷೆಯಾಗಿವೆ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ ಮಾತನಾಡಿ ವಿಶ್ವ ಮಾನವ ಬಸವಣ್ಣನವರ ಜಯಂತಿ ಆಚರಿಸುವದು ನಮ್ಮ ಕರ್ತವ್ಯ ಅವರು ಶ್ರೇಷ್ಠ ದಾರ್ಶನಿಕ ವ್ಯಕ್ಕಿ, ಸಮಾಜದ ಸಮಾನತೆಗಾಗಿ ಬದುಕು ಸವೆಸಿದ ಮಹಾನ ಚೇತನ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅಭಿಷೇಕ್ ಚಕ್ರವರ್ತಿ ಬಸವಣ್ಣ ಬಿಜ್ಜಳ ರಾಜನ ಅರ್ಥ ಬಂಡಾರದ ಮಂತ್ರಿಯಾಗಿದ್ದರೂ ಅವರಿಗೆ ಭಕ್ತಿ ಬಂಡಾರಿ ಬಸವಣ್ಣ ಎಂದು ಕರೆಯುತ್ತಾರೆ, ಇದು ಅವರು ಕರ್ತವ್ಯಕ್ಕೆ ಸಂದ ಗೌರವ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಜ್ಯೋತಿ ಪುರಸ್ಕಾರ ದತ್ತಿ ರಾಜ್ಯ ಪ್ರಶಸ್ತಿ ವಿಜೇತರಾದ ಸಂಗೀತಾ ಮಠಪತಿ ಮತ್ತು ಸಾವಿತ್ರಿಬಾಯಿ ಪುಲೆ ರಾಜ್ಯ ಪ್ರಶಸ್ತಿ ಪುರಸ್ಕøತರು ಆದ ಕಮಲಾ ಮುರಾಳ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ ಸಂಗಮೇಶ ಮೇತ್ರಿ, ರಾಜಾಸಹೇಬ ಶಿವನಗುತ್ತಿ, ಸುಖದೇವಿ ಅಲಬಾಳ, ಕವಿತಾ ಕಲ್ಯಾಣಪ್ಪಗೋಳ, ಅಹ್ಮದ ವಾಲೀಕಾರ, ಎಸ್ ಎಂ ಕಾಸಿನಕುಂಟಿ, ವಿಜಯಲಕ್ಷ್ಮಿ ಕೌಲಗಿ, ಅನೀಲ ಬಬಲೇಶ್ವರ, ವಿಶ್ವನಾಥ ಅರಬಿ, ಶಿವಾಜಿ ಮೋg,É ಶಿವಲೀಲಾ ಕೋರಿ ರುದ್ರಮ್ಮಾ ಗಿಡ್ಡಪ್ಪಗೋಳ ರುಕ್ಮಿಣಿ ಅಗಸರ ಸಿದ್ದನಗೌಡ ಕಾಶಿನಕುಂಟೆ ಲಕ್ಷ್ಮಿ ಬಿದರಕುಂದಿ ಮುಂತಾದವರು ಉಪಸ್ಥಿತರಿದ್ದರು