ಕಾವ್ಯಕ್ಕೆ ಸಂಕ್ಷಿಪ್ತತೆ, ಭಾವತೀವ್ರತೆ, ಹಾಡುವ ರಾಗ, ಅಭಿವ್ಯಕ್ತಿ ಮುಖ್ಯ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.04:- ಕಾವ್ಯಕ್ಕೆ ಸಂಕ್ಷಿಪ್ತತೆ, ಭಾವತೀವ್ರತೆ, ಹಾಡುವ ರಾಗ, ಅಭಿವ್ಯಕ್ತಿ ಮುಖ್ಯ ಎಂದು ಹಿರಿಯ ವಿದ್ವಾಂಸ ಡಾ.ಕೆ. ಅನಂತರಾಮು ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟವು ಆಲನಹಳ್ಳಿ ವರ್ತುಲ ರಸ್ತೆಯ ಬಳಿ ಇರುವ ಶ್ರೀ ವಾಸವಿ ಶಾಂತಿಧಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್. ಪುಟ್ಟಪ್ಪ ಮುಡಿಗುಂಡ ಅವರ ಜೇನುಗೂಡು ಕವನ ಸಂಕಲನ ಬಿಡುಗಡೆ ಹಾಗೂ ಪೇಜಾವರ ಶ್ರೀಗಳ ಗುರುವಂದನೆ
ಕಾರ್ಯಕ್ರಮದಲ್ಲಿ ಗುರುಮಹಿಮೆ ಕುರಿತು ಉಪನ್ಯಾಸ ನೀಡಿದ ಅವರು, ಈ ನಾಲ್ಕು ಗುಣಗಳಿದ್ದಾಗ ಮಾತ್ರ ಕವನ ಎನಿಸಿಕೊಳ್ಳುತ್ತದೆ ಎಂದರು.
ಪುಟ್ಟಪ್ಪ ಅವರ ಕವನಗಳಲ್ಲಿ ಈ ನಾಲ್ಕು ಅಂಶಗಳ ಅಡಕವಾಗಿವೆ ಎಂದು ಅವರು ಶ್ಲಾಘಿಸಿದರು.
ಅe?ಞÁನವನ್ನು ನಾಶ ಮಾಡಿ, e?ಞÁನ ದಯಪಾಲಿಸುವವರೇ ಗುರು. ಅಂಧಕಾರ ನಿವಾರಣೆ ಮಾಡುವವರೇ ಗುರು ಎಂದು ಅವರು ಹೇಳಿದರು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಆಶೀರ್ವಚನ ನೀಡಿ, ಭಗವದ್ಗೀತೆಯಲ್ಲಿ ಬದುಕಿನ ದಾರಿ ತೋರಿದವನು ಕೃಷ್ಣ. ಶ್ರೀರಾಮ, ಶ್ರೀಕೃಷ್ಣ ಇಬ್ಬರೂ ಆದರ್ಶಪುರುಷರೇ ಎಂದರು.
ತಂದೆ- ತಾಯಿ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುತ್ತೇವೆ. ತಪ್ಪು ಮಾಡಿದ್ದನ್ನು ತಿದ್ದುವವನು ಗುರು ಎಂದರು.
ಜೇನುಗೂಡಿಗೆ ಯಾರೂ ಕೈಹಾಕಬಾರದು. ಆದರೆ ಪುಟ್ಟಪ್ಪ ಅವರು ಜೇನಗೂಡು ಕವನದ ಮೂಲಕ ಪ್ರಕೃತಿ ಮೇಲಿನ ದೌರ್ಜನ್ಯ, ತಂದೆ- ತಾಯಿಯರನ್ನು ವೃದ್ಧಾಶ್ರಮಕ್ಕೆ ಹಾಕುವ ಮಕ್ಕಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
`ಜೇನುಗೂಡು’ ಕವನ ಸಂಕಲನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿ ಮಾತನಾಡಿ, ಈ ಆದಿ, ಅಂತ್ಯ ಪ್ರಾಸ ಹಾಗೂ ಲಯದಿಂದ ಕೂಡಿರುವ ಇಲ್ಲಿನ ಕವನಗಳು ಪ್ರಾರ್ಥನಾ ಗೀತೆ, ಭಾವಗೀತೆ, ಜಾನಪದ ಗೀತೆಗಳಾಗಿವೆ. ಕವಿ ಸಮಕಾಲೀನ ಸಮಸ್ಯೆಗಳಿಗೂ ಸ್ಪಂದಿಸಿ, ಕವನ ರಚಿಸಿದ್ದಾರೆ. ಎಲ್ಲವನ್ನು ಹಾಡುವಷ್ಟು ಉತ್ತಮವಾಗಿವೆ ಎಂದರು.
ಕವಯತ್ರಿ ಡಾ.ಲತಾ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೆ. ರಘುರಾಂ ಮುಖ್ಯ ಅತಿಥಿಯಾಗಿದ್ದರು.
ಶ್ರೀ ವಾಸವಿ ಶಾಂತಿಧಾಮದ ಸಂಸ್ಥಾಪಕ ಗೌರವ ಕಾರ್ಯದರ್ಶಿ ಬಿ.ವಿ. ಶ್ರೀನಿವಾಸ ಗುಪ್ತ, ಕಾರ್ಯಕ್ರಮ ಸಂಘಟಕ ಸಿ. ಮೋಹನ್‍ರಾಜು,
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಶರಣ ಸಾಹಿತ್ಯ ಪರಿಷತ್ತು ಮೈಸೂರೂ. ತಾ. ಅಧ್ಯಕ್ಷ ದೇವರಾಜು ಪಿ. ಚಿಕ್ಕಹಳ್ಳಿ ನಿರೂಪಿಸಿದರು. ಲಲಿತಾ ಪಾಟೀಲ್ ಪ್ರಾರ್ಥಿಸಿದರು.