ಕಾವೇರುತ್ತಿರುವ  ಬಿಜೆಪಿ ಪ್ರಚಾರ ಅಂದ್ರಾಳ್ ನಲ್ಲಿ ಶಾಸಕ ರೆಡ್ಡಿ ಮತಯಾಚನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.21: ನಗರ ಶಾಸಕ,ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಅವರ ಮನೆ ಮನೆ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಇಂದು ಅವರು  ನಗರದ 8ನೇ ವಾರ್ಡಿನ  ಅಂದ್ರಾಳ್ ನಲ್ಲಿ  ಮಾಜಿ ಕಾರ್ಪೊರೇಟರ್ ಸೀತರಾಂ ಅವರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬಳ್ಳಾರಿ ನಗರದಲ್ಲಿ ಆಗಿರುವ ಹಾಗೂ ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನಕ್ಕೆ ಸ್ಪಷ್ಟ ಸಂದೇಶ ನೀಡುವ ಮೂಲಕ ತಮಗೆ ಮತ ನೀಡುವಂತೆ  ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾರ್ಡಿನ,  ಮತ್ತು  ಭಾಜಪದ ಪ್ರಮುಖ ಮುಖಂಡರು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

One attachment • Scanned by Gmail