ಕಾವೇರಿ 2.0 ತಂತ್ರಾಂಶ ಪರಿಚಯ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 16: ಸಂಡೂರು ಸಾರ್ವಜನಿಕರ ಆಸ್ತಿ ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ಸುಲಭಗೊಳಿಸಲು ಸರಕಾರ ಕಾವೇರಿ 2.0 ತಂತ್ರಾಂಶವನ್ನು ಪರಿಚಯಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದಕೊಳ್ಳಬೇಕು ಎಂದು ಜಿಲ್ಲಾ ನೋಂದಣಾಧಿಕಾರಿ ಮಾಲು ಸಾ ಬೇಗಂ ತಿಳಿದರು.
ಅವರು ಪಟ್ಟಣದ ಉಪನೋದಂಣಿ ಕಛೇರಿಯಲ್ಲಿ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಆಯೋಜಿಸಿದ ಕಾವೇರಿ: 2.0 ತಂತ್ರಾಂಶದ ನೋಂದಣಿ ಮಾಡುವ ಮುಲಕ ಉದ್ಘಾಟಿಸಿ ಮಾತನಾಡಿ ಹೊಸ ಕಾವೇರಿ ತಂತ್ರಂಶದೊಂದಿಗೆ ಆಸ್ತಿ ನೊಂದಣಿಗೆ ಅನುಕೂಲ ಮಾಡಿಕೊಟ್ಟಿದೆ. ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಆಸ್ತಿ ನೋಂದಣಿಗೆ ಸಾರ್ವಜನಿಕರು ಇಲಾಖೆ ಅರ್ಜಿಗಳನ್ನು ಸಲ್ಲಿಸಿ ದಿನಗಳಗಟ್ಟಲೆ ಓಡಾಡಬೇಕಾಗಿತ್ತು ನೋಂದಣಿ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಹಾಗೂ ಮದ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಸಾರ್ವಜನಿಕರೆ ಆನ್ ಲೈನ್ ಮೂಲಕ ದಾಖಲೆಗಳನ್ನು ಅಪ್‍ಲೋಡ್ ಮಾಡಿ ತಮಗೆ ಬೇಕಾಗಿರುವ ದಿನಾಂಕವನ್ನು ಆಯ್ಕೆ ಮಾಡಿಕೊಂಡು ದಸ್ತಾವೇಜಗಳನ್ನು ನೋಂದಣಿ – ಮಾಡಿಕೊಳ್ಳ ಬಹುದು  ಇದೊಂದು ಯೂಸರ್ ಫ್ರೆಂಡ್ಲಿ  ತಂತ್ರಾಂಶವಾಗಿದೆ ಎಂದು ಹೇಳಿದರು ಕಾವೇರಿ ತಂತ್ತಾಂಶದಲ್ಲಿ ಯಾವ ರೀತಿಯಲ್ಲಿ ಜನರು ನೋಂದಣಿ ಮಾಡಬೇಕೆಂದನ್ನು ತಿಳಿದುಕೊಂಡು ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಫರಿದಾ ಬೇಗಂ, ಉಪ ನೊಂದಣಾಧಿಕಾರಿ ಸಂಡೂರು ಚಾಲನೆಗೆ ಬಳ್ಳಾರಿ ಜಿಲ್ಲೆಯ ಸಹಾಯಕ ನೋಡಲ್ ಅಧಿಕಾರಿಯಾದ ಆನಂದರಾವ್, ಬದನೆಕಾಯಿರವರ ಉಪ ನೊಂದಣಾಧಿಕಾರಿಗಳು, ಬಳ್ಳಾರಿ, ಉಪಸ್ಥಿತಿರಿದ್ದರು ಇದ್ದರು. ಕಾವೇರಿ ತಂತ್ರಾಂಶದ ಅಭಿಯಂತರರಾದ ಮಹೇಶ, ಮುಸ್ತಫ ರಘು ಅವರು ತಂತ್ರಾಂಶದ ಪ್ರೋಜೆಕ್ಟ್ ಪರಿಚಯಿಸಿದರು, ಈ ಸಂದರ್ಭದಲ್ಲಿ ಎಸ್.ಡಿ.ಸಿ. ಗಾದಿಲಿಂಗಪ್ಪ, ಉಪನೊಂದಣಾಧಿಕಾರಿ, ಅಪರೇಟರ್ ಸರಸ್ವತಿ, ಮೇಘಶ್ರೀ. ಯುವರಾಜ.ಸಿ., ಪತ್ರ ಬರಹಗಾರರು, ಸಾರ್ವಜನಿಕರು ಉಪಸ್ಥಿತರಿದ್ದರು.