ಕಾವೇರಿ 2.0 ತಂತ್ರಾಂಶ ತರಬೇತಿ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.20: ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಕಾವೇರಿ 2.0 ತಂತ್ರಾಂಶದ ತರಬೇತಿ ಕಾರ್ಯಕ್ರಮವನ್ನು ನಗರದ ಪತಂಗೆ ಆರ್ಕೆಡ್ ಸಭಾಂಗಣದಲ್ಲಿ ಗಿಡಕ್ಕೆ ನೀರು ಹಾಕುವುದುರ ಮೂಲಕ ಉದ್ಘಾಟಿಸಿ ಮಾತನಾಡಿದರು.
 ನಗರದ ಉಪನೋಂದಣಿ ಅಧಿಕಾರಿಗಳ ಕಾರ್ಯಲದಲ್ಲಿ ಕಾರ್ಯನಿರ್ವಾಹಿಸುವ ಎಲ್ಲಾ ಸಿಬ್ಬಂದಿಗಳಿಗು ಅನುಕೂಲವಾಗಲು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕಾವೇರಿ 2.0 ತಂತ್ರಾಂಶವನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಉಪನೋಂದಣಿ ಅಧಿಕಾರಿ ಮಾಬುನಿ ಬೇಗಂ ತಿಳಿಸಿದರು.
 ತಾಲೂಕು ಉಪನೋಂದಣಿ ಅಧಿಕಾರಿ ಯಲ್ಲರೆಡ್ಡೆಪ್ಪ, ಲಕ್ಷ್ಮಿ ನಾರಾಯಣ, ಇಂಜಿನಿಯರ್ ಮಹೇಶ್ ಹಾಗೂ ತಾಲೂಕಿನ ವಕೀಲರು ಮತ್ತು ಪತ್ರ ಬರಹಗಾರರು ಇದ್ದರು.