ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.15: ನಗರದ ಹಿರಿಯ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
 ಬಳ್ಳಾರಿ ಜಿಲ್ಲೆಯ ನೋಂದಣಾಧಿಕಾರಿ ಮಾಬುನ್ನಿಸಾ ಬೇಗಂ ತಂತ್ರಾಂಶ ಕಾರ್ಯಕ್ರಮವನ್ನು ಉದ್ಘಾಟಿಸಿ ನೋಂದಣಿದಾರರಿಗೆ ದಾಖಲೆಗಳನ್ನು ವಿತರಿಸಿ ಆನ್ ಲೈನ್ ಮೂಲಕ ಆಸ್ತಿ ನೋಂದಣಿ ಮಾಡುವ ಹೋಸ ತಂತ್ರಾಂಶ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕಿನ ನಗರದ ಮತ್ತು ವಿವಿಧ ಗ್ರಾಮಗಳ ಜನರು ಕಛೇರಿಗೆ ಅಲೆಯವುದನ್ನು ಹಾಗೂ ಜನರ ಅನುಕೂಲಕ್ಕೆ‌ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಪ್ರಸ್ತುತ ಈ ತಂತ್ರಾಂಶ ಅಳವಡಿಸಲಾಗಿದೆ, ನೋಂದಣಿದಾರರು ಮನೆಯಿಂದ ತಮ್ಮ ದಾಖಲೆಗಳನ್ನು ಮೊಬೈಲ್ ಯಿಂದ ಅಪ್ ಲೋಡ್ ಮಾಡಬಹುದಾಗಿದೆ, ನೋಂದಣಿ ದಿನಾಂಕ, ಸಮಯ ವನ್ನು ನೋಂದಣಿದಾರರ ಮೊಬೈಲ್ ಗೆ ಸಂದೇಶವನ್ನು ಕಳುಹಿಸಲಾಗುತ್ತದೆ, ಮುದ್ರಾಂಕದ ಶುಲ್ಕವನ್ನು ಆನ್ ಲೈನ್ ಮೂಲಕ 15ನಿಮಿಷದಲ್ಲಿ ಕಟ್ಟ ಬಹುದಾಗಿದೆ ಹಾಗೂ ಕಾವೇರಿ ತಂತ್ರಾಂಶದ ಅಳವಡಿಕೆ ಮತ್ತು ಬಳಕೆಯ ಕುರಿತು ನೋಂದಣಿದಾರರಿಗೆ ತಿಳಿಸಕೊಡಲು ದಸ್ತಾವೇಜು ಬರಹಗಾರರಿಗೆ ಈಗಾಗಲೇ ತರಬೇತಿ ನೀಡಿದ್ದು, ನೋಂದಣಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡು‌ ಇದರ ಉಪಯೋಗವನ್ನು ಪಡೆಯಬೇಕಾಗಿದೆ ಎಂದು ಹೇಳಿದರು.
ಉಪ ನೋಂದಣಿ ಅಧಿಕಾರಿ ಯಲ್ಲರೆಡ್ಡೆಪ್ಪ, ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಪತ್ರ ಬರಹಗಾರರು ಹಾಗೂ ವಕೀಲರು ಮತ್ತು ನೋಂದಣಿ ಕಛೇರಿಯ ಸಿಬ್ಬಂದಿಯವರು ಇದ್ದರು.