ಕಾವೇರಿ: ಸಿಎಂ, ಡಿಸಿಎಂ ರಿಂದ ಪ್ರಧಾನಿಗೆ ಮನವರಿಕೆ


ಹುಬ್ಬಳ್ಳಿ, ಸೆ 3: ತೀವ್ರಗೊಂಡಿರುವ ಕಾವೇರಿ ನೀರಿನ ವಿಷಯದಲ್ಲಿ ರಾಜ್ಯದ ಪ್ರಸಕ್ತ ಸ್ಥಿತಿಗತಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಿಯೋಗ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಿದೆ ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿಯೇ ನೀರಿಲ್ಲದಾಗ ತಮಿಳ್ನಾಡು, ಆಂಧ್ರಗಳಿಗೆ ಹೇಗೆ ನೀರು ಕೊಡಲು ಸಾಧ್ಯ? ಎಂದು ಪ್ರಶ್ನಿಸಿದರು.
ನೀರು ಬಿಡಲು ಆದೇಶ ಮಾಡಿದ ಮಂಡಳಿ ಹಾಗೂ ನ್ಯಾಯಾಧೀಶರು ಇಲ್ಲಿ ನೀರು ಇದೆಯಾ? ಎಂಬುದನ್ನು ಪರೀಕ್ಷಿಸಲಿ ಎಂದು ಅವರು ನುಡಿದರು.
ಮಹದಾಯಿ ವಿಷಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಮಹಾದಾಯಿ ವಿಷಯದಲ್ಲಿ ಗೆÉದ್ದೇಬಿಟ್ಟೆವೆಂದು ಬಿಜೆಪಿಯವರು ವಿಜಯೋತ್ಸವ ಮಾಡಿದ್ದರು. ಆದರೀಗ ಏನೂ ಮಾತನಾಡುತ್ತಿಲ್ಲ ಎಂದ ಅವರು, ಮಹದಾಯಿ ಜಾರಿಯಾಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.