ಕಾವೇರಿ ಸಾಂಸ್ಕೃತಿಕ ವೇದಿಕೆಯಿಂದ ವಿಶ್ವ ಪರಿಸರ ದಿನಾಚರಣೆ

ದಾವಣಗೆರೆ.ಜೂ.೫; ಕುಂದುವಾಡ ರಸ್ತೆಯ ಮಹಾಲಕ್ಷ್ಮಿ ಬಡಾವಣೆಯ ಕಾವೇರಿ ಅಪಾರ್ಟ್ಮೆಂಟ್ ಹೊರಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾವೇರಿ ಅಪಾರ್ಟ್ಮೆಂಟ್ ನಿವಾಸಿಗಳ ಸಂಘಟನೆ “ಕಾವೇರಿ ಸಾಂಸ್ಕೃತಿಕ ವೇದಿಕೆ”ಯ ಆಶ್ರಯದಲ್ಲಿ ವನ ಮಹೋತ್ಸವ ಆಚರಿಸಲಾಯಿತು.ಮಾಸ್ಕ್ ಧಾರಣೆ, ಸಾಮಾಜಿಕ ಅಂತರದಲ್ಲಿ ಸರಳವಾಗಿ ಗಿಡಗಳನ್ನು ನೆಡುವ ಮೂಲಕ ನಡೆದ ವನ ಮಹೋತ್ಸವದಲ್ಲಿ ಮಹಾಲಕ್ಷ್ಮಿ ಬಡಾವಣೆಯ ನಾಗರೀಕ ಸಮಿತಿ ಅಧ್ಯಕ್ಷರಾದ ಪ್ರಕಾಶ್‌ಕುಮಾರ್ ಗಿಡಕ್ಕೆ ನೀರೆರೆಯುವ ಮೂಲಕ ವನಮಹೋತ್ಸವ ಉದ್ಘಾಟಿಸಿದರು, ಕಾವೇರಿ ಸಾಂಸ್ಕೃತಿಕ ವೇದಿಕೆಯ ಕುಟುಂಬದ ಮಕ್ಕಳು ಜೋಡಿಸಿದರು, ಕಾವೇರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್‌ಶೆಣೈ ಸೇರಿದಂತೆ  ನಿರ್ಮಲಾ ಚಂದ್ರಪ್ಪ,  ಸವಿತಾ ಹರೀಶ್,  ಜ್ಯೋತಿ ಗಣೇಶ್‌ಶೆಣೈ,  ಸವಿತಾ ಶ್ರೀನಿಧಿ,  ಅನಿತಾ ಸುನೀಲ್ ಮುಂತಾದವರು ಮುಂತಾದವರು ಉಪಸ್ಥಿತರಿದ್ದರು,“ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ ಕಾವೇರಿ ಕುಟುಂಬದ ಮಕ್ಕಳಿಗೆ ಏರ್ಪಡಿಸಲಾದ ಪ್ರಕೃತಿ, ಪರಿಸರದ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.