ಕಾವೇರಿ ನೀರು ಮುಂದುವರೆದ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.26:- ತಮಿಳುನಾಡಿಗೆ ನದಿ ಮೂಲಕ ನೀರು ಹರಿಸುತ್ತಿರುವ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು. ಇದರಿಂದಾಗಿ ಸಾಂಸ್ಕೃತಿಕ ನಗರಿಯಲ್ಲೂ ಕಾವೇರಿ ಹೋರಾಟ ಕಾವು ಪಡೆದುಕೊಂಡಿದೆ.
ಪ್ರತ್ಯೇಕವಾಗಿ ನಡೆದ ಪ್ರತಿಭಟನಾ ಸ್ಥಳಗಳಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗಳು ಮೊಳಗಿದವು. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನೂ ಕೂಡಲೇ ಸ್ಥಗಿತಗೊಳಿಸಬೇಕು ಎಂದೂ ಆಗ್ರಹಿಸಿದರು.
ರಾಜ್ಯದಲ್ಲಿ ಬರಗಾಲ ಸ್ಥಿತಿ ನಿರ್ಮಾಣವಾಗಿದ್ದು, ವಾಡಿಕೆಯಷ್ಟು ಮಳೆ ಆಗಿಲ್ಲ. ಈಗಾಗಲೇ 236 ತಾಲೂಕುಗಳ ಪೈಕಿ 192 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ. ಕಾವೇರಿ ಕಣಿವೆ ಭಾಗದಲ್ಲಿ ಬರ ಪರಿಸ್ಥಿತಿ ಇದೆ. ಕೆಆರ್‍ಎಸ್ ಜಲಾಶಯದಲ್ಲಿ ಉಳಿದಿರುವುದು ಕೇವಲ 20 ಟಿಎಂಸಿ ನೀರಿಗಿಂತ ಕಡಿಮೆ ಮಾತ್ರ. ಅದರಲ್ಲಿ ಬಳಕೆಗೆ ಸಿಗುವುದು 15 ಟಿಎಂಸಿ ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾ„ಕಾರ ತಮಿಳುನಾಡಿಗೆ 7 ಟಿಎಂಸಿ ನೀರು ಹರಿಸಲು ಆದೇಶಿಸಿರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯುವ ನೀರಿಗೆ ಒಂದುವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರ ಹೊಲ ಗದ್ದೆಗಳಿಗೆ ಎಲ್ಲಿಂದ ನೀರು ತರಲು ಸಾಧ್ಯ. ರೈತರು ನೀರಿಗಾಗಿ ಏನು ಮಾಡಬೇಕು? ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಪ್ರಾ„ಕಾರದ ಆದೇಶ ಪಾಲಿಸಬಾರದು ಎಂದು ಆಗ್ರಹಿಸಿದರು.
ಕಾವೇರಿ ಸಮಿತಿಯಿಂದ ಪ್ರತಿಭಟನೆ:
ನಗರದ ಕನ್ನಡ ಸಂಘ ಸಂಸ್ಥೆಗಳು, ಪ್ರಗತಿಪರರು, ರೈತ ಮುಖಂಡರನ್ನು ಒಳಗೊಂಡ ಸಂಘಟನೆಯಾದ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಕೃಷ್ಣರಾಜ ವೃತ್ತದಲ್ಲಿರುವ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ನಡೆಸಿತು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈಗಲೂ ಅದು ಮುಂದುವರಿದಿದೆ ಎಂದು ಕಿಡಿಕಾರಿದರು. ಸಮಿತಿ ಅಧ್ಯಕ್ಷ ಜಯಪ್ರಕಾಶ್, ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಪದಾ„ಕಾರಿಗಳಾದ ಸುರೇಶ್‍ಗೌಡ, ಮೆಲ್ಲಹಳ್ಳಿ ಮಹದೇವಸ್ವಾಮಿ, ಆರ್.ರಘು, ಬಿ.ಎಸ್.ತುಳಸಿರಾಮ್, ಮೋಹನ್ ಕುಮಾರ್‍ಗೌಡ, ಬಾಲಕೃಷ್ಣ, ತೇಜೇಶ್ ಲೋಕೇಶ್ ಗೌಡ, ಸಮಿತಿಯ ಸದಸ್ಯರಾದ ಸಿದ್ಧಲಿಂಗಪ್ಪ ಎಸ್.ಬಸಪ್ಪ, ಪಿ.ಸಿ.ನಾಗರಾಜು, ನಾಲಾಬೀದಿ ರವಿ, ಮಹದೇವಸ್ವಾಮಿ, ಹನುಮಂತೇಶ್ ಇನ್ನಿತರರಿದ್ದರು
ತೆಂಗಿನಕಾಯಿ ಚಿಪ್ಪಿನ ಪ್ರತಿಭಟನೆ:
ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಸದಸ್ಯರು ತೆಂಗಿನಕಾಯಿ ಚಿಪ್ಪುಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು. ಕಾಡಾ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
ತಮಿಳುನಾಡಿಗೆ ಪ್ರತಿ ದಿನ 5,000 ಕ್ಯೂಸೆಕ್ ನೀರನ್ನು ಮುಂದಿನ 15 ದಿವಸಗಳ ವರೆಗೆ ಬಿಡಬೇಕೆಂಬ ಕಾವೇರಿ ಪ್ರಾ„ಕಾರ ಶಿ-ರಸು ಮಾಡಿದೆ. ಇದು ಖಂಡನೀಯ. ಜಲಾಶಯಗಳಲ್ಲಿ ನೀರಿಲ್ಲದ ಸಂಕಷ್ಟದ ಸಂದರ್ಭದಲ್ಲಿ ಹೇಗೆ ನೀರು ಬಿಡಲು ಸಾಧ್ಯ ಎಂದು ಪ್ರಶ್ನಿಸಿದರು
ಇನ್ನೂ ಹತ್ತಾರು ತಿಂಗಳು ಜನ-ಜಾನುವಾರಗಳಿಗೆ ಕುಡಿಯುವ ನೀರನ್ನು ಉಳಿಸಿಕೊಳ್ಳಬೇಕಿದೆ. ಒಣಗುತ್ತಿರುವ ಕೃಷಿ ಬೆಳೆಗಳಿಗೆ ನೀರು ಸಹ ಕೊಡಬೇಕಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದರು.
ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ಪೆÇ್ರ.ಕೆ.ಎಸ್.ಭಗವಾನ್, ಪೆÇ್ರ.ಸಿ.ಗಿರಿಗೌಡ, ಡಾ. ಲತಾರಾಜಶೇಖರ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಗಂಗಾಧರ್ ಗೌಡ, ಸಂಘಟನೆ ಅಧ್ಯಕ್ಷ ಶಿವಶಂಕರ್ ಸೇರಿದಂತೆ ಇನ್ನಿತರರಿದ್ದರು