ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.26:- ಜನತಾ ದರ್ಶನಕ್ಕೂ ಕಾವೇರಿ ಕಿಚ್ಚಿನ ಬಿಸಿ ತಟ್ಟಿದ್ದು ಒಂದೆಡೆ ಜನತಾ ದರ್ಶನ ನಡೆಯುತ್ತಿದ್ದರೇ ಮತ್ತೊಂದೆಡೆ ಕಬ್ಬು ಬೆಳೆಗಾರರು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ರೈತರ ಸಮಸ್ಯೆ ಕೇಳಲು ಸಚಿವ ಕೆ.ವೆಂಕಟೇಶ್ ಸಮಯ ನೀಡಿದ್ದರು. ಆದ್ರೆ, ಈಗ ಬರಲ್ಲ ಅಂತಿದ್ದಾರೆ ಎಂದು ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಖಾಲಿ ಮಡಕೆ ಒಡೆದು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನೀರನ್ನು ಬಂದ್ ಮಾಡಬೇಕುಎಂದು ಆಗ್ರಹಿಸಿದರು.
ಗಂಟೆ ಚಳವಳಿ: ಇನ್ನು, ಕನ್ನಡಪರ ಸಂಘಟನೆಗಳು ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಗಂಟೆ ಬಾರಿಸಿ ರಾಜ್ಯ ಹಾಗೂ ತಮಿಳುನಾಡು ವಿರುದ್ಧ ಆಕ್ರೋಶ ಹೊರಹಾಕಿದರು. ರೈತರ, ಜನರ ಸಮಸ್ಯೆಯನ್ನು ಕೇಳಿಸಿಕೊಳ್ಳದಿರುವುದರಿಂದ, ಕಿವಿ ಕಿವುಡಾಗಿರುವ ಸರ್ಕಾರಎಂದುರಸ್ತೆ ಮಧ್ಯೆಗಂಟೆ ಬಾರಿಸಿ ಆಕ್ರೋಶ ಹೊರಹಾಕಿದರು.
ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಬಂದ್ ಮಾಡಬೇಕೆಂದು ಹೋರಾಟಗಾರರು ಒತ್ತಾಯಿಸಿದರು.