ಕಾವಲು ಚೌಡೇಶ್ವರಿ ಜಾತ್ರಾ ಮಹೋತ್ಸವ

ಸಂಜೆವಾಣಿ ವಾರ್ತೆ

ನಾಯಕನಹಟ್ಟಿ.ಫೆ.೨೦ : ಬುಡಕಟ್ಟು ಸಮುದಾಯದ ಆರಾದ್ಯ ದೇವತೆಯಾದ ಕಾವಲು ಶ್ರೀಚೌಡೇಶ್ವರಿ ದೇವಿಯ ಜಾತ್ರೆಯು ಇಂದಿನಿಂದ ಅದ್ದೂರಿಯಾಗಿ ನಡೆಯಲಿದ್ದು, ರಥೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.ಪ್ರತಿವರ್ಷವೂ ಮಾಘಶುದ್ಧ ತ್ರಯೋದಶಿಯಂದು ಜಾತ್ರೆಯು ಆರಂಭವಾಗುತ್ತದೆ. ಅದರಂತೆ ಫೆ.19ರಂದು ಮದ್ಯಾಹ್ನ 3ಗಂಟೆಗೆ ಚೌಡೇಶ್ವರಿ ದೇವಿಯ ರಥಕ್ಕೆ ಕಳಸ ಸ್ಥಾಪನೆ ಮಾಡಲಾಗುವುದು. ನಂತರ ದೇವಿಗೆ ಗಂಗಾಪೂಜೆಯನ್ನು ನೆರವೇರಿಸಿ ಸ್ವಸ್ತಿವಾಹನ, ಕಂಕಣಧಾರಣೆ, ಮಂಟಪಪೂಜೆ, ನವಗ್ರಹ ಆರಾಧನೆ ಕೈಗೊಳ್ಳಲಾಗುವುದು. ಫೆ.20ರಂದು ದೇವಾಯಲದ ಗುಡಿಕಟ್ಟಿನವರು ದೇವಿಗೆ ಹುಡಿಹಕ್ಕಿ ತುಂಬುವುದು, ಕಾಸುಮೀಸಲು ಹರಕೆ ಒಪ್ಪಿಸಿ ಮದ್ಯಾಹ್ನ 3ಗಂಟೆಗೆ ಚೌಡೇಶ್ವರಿ ದೇವಿಯನ್ನು ಸುಂದರವಾಗಿ ಅಲಂಕೃತಗೊAಡ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಜಾತ್ರೆಗೆ ಚಾಲನೆ ನೀಡಿಲಾಗುವುದು. ನಂತರ ರಥವು ಪಾದಗಟ್ಟೆಗೆ ಹೋಗಿಬಂದು ಸ್ವಸ್ಥಾನ ಸೇರುತ್ತದೆ. ಫೆ.21ರಂದು ವೀರ ಪೋತುರಾಜರಿಂದ ಪೂಜಾ ವಿಧಿವಿಧಾನಗಳ ಕಾರ್ಯಕ್ರಮ, ಸಂಜೆ 4ಗಂಟೆಗೆ ಭಕ್ತರಿಂದ ಸಿಡಿ ಉತ್ಸವ, ಅಂತಿಮವಾಗಿ ದೇವಿಗೆ ಕಂಕಣ ವಿಸರ್ಜನೆ ಹಮ್ಮಿಕೊಂಡಾಗ ಜಾತ್ರೆಯು ಮುಕ್ತಾಯವಾಗಲಿದೆ.ಚೌಡೇಶ್ವರಿ ದೇವಿಯ ಐತಿಹ್ಯ ಸುಮಾರು 600ವರ್ಷಗಳ ಹಿಂದೆ ಸಿಂಗದೂರಿನಿಂದ ಬಂದ ಚೌಡೇಶ್ವರಿ ದೇವಿಯು ನಾಯಕನಹಟ್ಟಿ ದೊಡ್ಡಕೆರೆಯ ಸಮೀಪದಲ್ಲಿರುವ ಬೃಹತ್ ಈಚಲು ಅರಣ್ಯದಲ್ಲಿ ನೆಲೆನಿಂತು ಹುತ್ತಗಳಲ್ಲಿ ವಾಸ ಮಾಡುತ್ತಿರುತ್ತಾಳೆ. ಇದೇವೇಳೆ ಸಮೀಪದ ಗ್ರಾಮದ ಈಡಿಗ ಸಮುದಾಯದವರು ಈಚಲು ವನದಲ್ಲಿ ಶೇಂಧಿಗಾಗಿ ಈಚಲು ಮರಗಳಿಗೆ ಮಡಿಕೆಗಳನ್ನು ಕಟ್ಟುತ್ತಿರುತ್ತಾರೆ. ಹೀಗೆ ಒಂದುದಿನ ಅರಣ್ಯದ ತುಂಬೆಲ್ಲಾ ಹುತ್ತಗಳು ಬೆಳೆದು ನಿಂತಾಗ ಸಿಟ್ಟಿಗೆದ್ದ ಅವರು ಹುತ್ತಗಳನ್ನು ನಾಶ ಮಾಡಿ, ಈಚಲು ಮರಗಳಿಗೆ ಮಡಿಕೆಗಳನ್ನು ಕಟ್ಟಿ ಬರುತ್ತಾರೆ. ಮರುದಿನ ಬಂದು ಮಡಿಕೆಗಳನ್ನು ನೋಡಿದರೆ ಒಂದು ಮಡಿಕೆಯಲ್ಲೂ ಹನಿ ಶೇಂಧಿಯು ಸಂಗ್ರಹವಾಗಿರುವುದಿಲ್ಲವAತೆ. ಇದರಿಂದ ಭಯಗೊಂಡ ಅವರು ಚಿಂತೆಯಲ್ಲಿದ್ದಾಗ ಯಾರೋ ಒಬ್ಬ ಸಾಧು ಇದು ದೇವಿಯ ಮಹಿಮೆಯಾಗಿದೆ. ಮೊದಲು ಕ್ಷಮೆಬೇಡಿಕೊಳ್ಳಿ ಎಂದರAತೆ. ಅದರಂತೆ ಕ್ಷಮೆಯಾಚಿಸಿ ಅಂದೇ ಒಂದು ಪುಟ್ಟ ಕಲ್ಲಿನ ಗುಡಿಯನ್ನು ನಿರ್ಮಿಸಿದರಂತೆ. ಇದರಿಂದ ದೇವಿಯು ಸಂತೋಷಗೊAಡು ಮರುದಿವಸ ಈಚಲು ಮರಕ್ಕೆ ಕಟ್ಟಿದ ಎಲ್ಲಾ ಮಡಿಕೆಗಳಿಂದ ಶೇಂಧಿಯು ತುಂಬಿ ಹರಿಯುತಿತ್ತು. ಅಂದಿನಿAದ ಪ್ರತಿವರ್ಷವೂ ಜಾತ್ರೆ, ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿವೆ. ಆದರೆ 2002ರಿಂದ ಈಚಗೆ ನೂತನ ದೇವಾಲಯವನ್ನು ನಿರ್ಮಾಣಮಾಡಿ ವಿಜೃಂಭಣೆಯಿAದ ಜಾತ್ರೆ, ಉತ್ಸವಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ ಹೇಳುತ್ತಾರೆ.ಪುಷ್ಕರಣೆ ನೀರು ಸರ್ವರೋಗಕ್ಕೂ ಔಷಧಿ 400 ವರ್ಷಗಳ ಹಿಂದೆ ದೇವಾಲಯದ ಸಮೀಪದಲ್ಲಿ ಒಂದು ಪುಷ್ಕರಣೆಯನ್ನು ನಿರ್ಮಾಣ ಮಾಡಲಾಗಿದೆ. ಈ ಪುಷ್ಕರಣೆಯಲ್ಲಿ ಯಾವಾಗಲೂ ನೀರು ತುಂಬಿ ಸಮೃದ್ಧಿಯಾಗಿತ್ತು. ಅಂದು ಈ ಭಾಗದಲ್ಲಿ ಯಾವುದೇ ರೋಗರುಜಿನೆಗಳು, ಚರ್ಮರೋಗ ಕಂಡು ಬಂದರೆ ಇಲ್ಲಿನ ಪುಷ್ಕರಣೆಯ ನೀರಿನಿಂದ ಸ್ನಾನ ಮಾಡಿದರೆ ವಾಸಿಯಾಗುತ್ತಿತ್ತು ಎನ್ನುವ ಪ್ರತೀತಿ ಇದೆ. ಕೃಷಿಮೂಲ ಪರಂಪರೆಯ ಹಿನ್ನೆಲೆಯಲ್ಲಿ ರೈತರ ಜಾನುವಾರುಗಳಿಗೆ ಯಾವುದೇ ರೋಗಗಳು ಬಂದರೂ ದೇವಿಯ ದೇಗುಲ ಪ್ರದಕ್ಷಿಣೆ ಮಾಡಿಸಿದರೆ ಸಾಕು ಪರಿಹಾರ ದೊರೆಯುತ್ತದೆ ಎನ್ನುವ ಬಲವಾದ ನಂಬಿಕೆ ಈ ಭಾಗದ ರೈತರಲ್ಲಿದೆ. ಹಾಗಾಗಿ ಇಂದಿಗೂ ಜಾತ್ರೆ ದಿನ ಸಂಜೆ ರೈತರು ತಮ್ಮ ಜಾನುವಾರುಗಳನ್ನು ದೇವಾಲಯಕ್ಕೆ ಪ್ರದಕ್ಷಣೆ ಹಾಕಿಸಿ ಆ ರಾತ್ರಿ ಅಲ್ಲಿಯೇ ತಂಗಿಸಿ ಮರುದಿನ ತಮ್ಮ ಗ್ರಾಮಗಳಿಗೆ ಕರೆದುಕೊಂಡು ಹೋಗುತ್ತಾರೆ. ಜತೆಗೆ ಮದುವೆಯಾಗದ ಯುವತಿಯರು, ಮಕ್ಕಳಾಗದ ಮಹಿಳೆಯರು,ಚಿಕ್ಕಮಕ್ಕಳಿಗೆ ಸೀತಾಳು ಸಿಡಿಬು, ಅಮ್ಮನಂತಹ ಸಾಂಕ್ರಮಿಕ ರೋಗಗಳು, ರೈತರು ಕೊಳವೆಬಾವಿ ಕೊರೆಯಿಸಲು ಸಂಕಲ್ಪ ಮಾಡಿಕೊಂಡಾಗ ದೇವಿಯೂ ಎಲ್ಲಾ ಸಮಸ್ಯೆಗಳನ್ನು ಈಡೇರಿಸುತ್ತಾಳೆ ಎನ್ನುವ ಬಲವಾದ ನಂಬಿಕೆಯಿದೆ. ಅದಕ್ಕಾಗಿ ತಾವು ಬೆಳೆದ ದವಸ ದಾನ್ಯಗಳನ್ನು ಅರ್ಪಿಸಿ ಪರುವು ಮಾಡಿಕೊಂಡು ಹರಕೆಯನ್ನು ಸಲ್ಲಿಸುತ್ತಾರೆ. ಒಟ್ಟಾರೆಯಾಗಿ ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ, ಎತ್ತಿನಹಟ್ಟಿ, ಉಪ್ಪಾರಹಟ್ಟಿ, ಗೌಡಗೆರೆ, ದೇವರಹಟ್ಟಿ ಸೇರಿದಂತೆ ತಳುಕು, ಮೊಳಕಾಲ್ಮುರು, ಜಗಳೂರು, ಕೊಟ್ಟೂರು, ಕೂಡ್ಲಿಗಿ, ದಾವಣಗೆರೆ ಜಿಲ್ಲೆ ಸೇರಿದಂತೆ ನೆರೆಯ ಆಂದ್ರ ಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಎಲ್ಲಾ ಜನಾಂಗದ ಭಕ್ತರು ಆಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು) ಹೇಳುತ್ತಾರೆ.ಜೋಡೆತ್ತಿನ ಗಾಡಿ ಸ್ಪರ್ಧೇ ಆಕರ್ಷಣೆಮೊದಲ ಬಾರಿಗೆ ಚೌಡಮ್ಮನ ಜಾತ್ರೆ ಪ್ರಯುಕ್ತ ಜೋಡೆತ್ತಿನ ಗಾಡಿ ಸ್ಪರ್ಧೇಯನ್ನು ಆಯೋಜಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಸ್ಪರ್ಧೇ ನಡೆಯಲಿದ್ದು, ಅತ್ಯಂತ ರೋಮಾಂಚನಕಾರಿಯಾಗಿದೆ. ಪ್ರಥಮ ಬಹುಮಾನ ರೂ.20ಸಾವಿರ, ದ್ವಿತೀಯ ಬಹುಮಾನ ರೂ.15ಸಾವಿರ, ತೃತೀಯ ಬಹುಮಾನ ರೂ.8ಸಾವಿರ ಮತ್ತು ನಾಲ್ಕನೇ ಬಹುಮಾನ 4ಸಾವಿರ ನಿಗದಿಪಡಿಲಾಗಿದ್ದು, 40ಕ್ಕೂ ಹೆಚ್ಚು ಜೋಡಿರಾಸುಗಳು ಆಗಮಿಸುವ ನೀರಿಕ್ಷೆಯಿದೆ.