ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ರೆಮ್‍ಡಿಸಿವರ್ ಚುಚ್ಚುಮದ್ದು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ ಪೋಲಿಸರು

ವಿಜಯಪುರ, ಮೇ.3-ಕೋವಿಡ್ ರೋಗಿಗಳಿಗೆ ನೀಡುವ ರೆಮ್‍ಡಿಸಿವರ್ ಚುಚ್ಚುಮದ್ದನ್ನು ಅಕ್ರಮವಾಗಿ ಇಟ್ಟುಕೊಂಡು, ಹಣ ಸಂಪಾಧನೆ ಮಾಡುವ ಉದ್ದೇಶದಿಂದ 22,000 ರೂಗಳಿಗೆ ಒಂದರಂತೆ ಮಾರಾಟ ಮಾಡುತ್ತಿದ್ದ ಮೂವರನ್ನು ಪೋಲಿಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಗ್ಗೆ ಖಚಿತ ಮಾಹಿತಿ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟ್‍ರ್ ರವೀಂದ್ರ ಕೆ ನಾಯ್ಕೋಡಿ, ಪಿ.ಎಸ್‍ಐ ಶರಣಗೌಡ ಬಿ ಗೌಡರ, ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಔದ್ರಮ ರವರು ಹಾಗೂ ಗಾಂಧಿಚೌಕ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಎಸ್.ವಿ ಜೋಗಿನ, ಬಿ.ಕೆ ಗುಡಿಮನಿ, ಹಾಗೂ ಆರ್.ಬಿ ಬಿರಾದಾರ ರವರು ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ದಾತ್ರಿ ಮಸಿದಿಯ ಹತ್ತಿರ ದಾಳಿ ಮಾಡಿ, ಆರೋಪಿತನಾದ ರಾಕೇಶ ತಂದೆ ಹಣಮಂತ ಹಲಗಣಿ, ಈತನಿಂದ ಎರಡು ರೆಮ್‍ಡಿಸಿವರ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು 1) ರಾಕೇಶ ತಂದೆ ಹಣಮಂತ ಹಲಗಣಿ, 2) ರೂಪಾಲಿ ಗಂಡ ರಾಕೇಶ ಹಲಗಣಿ, ಸ್ಟಾಪ್ ನರ್ಸ್ ಧನ್ವಂತರಿ ಆಸ್ಪತ್ರೆ, ವಿಜಯಪುರ ಹಾಗೂ 3) ಶೋಭಾ ಭಿಮಣ್ಣ ತಳವಾರ, ಸ್ಟಾಪ್ ನರ್ಸ್ ಧನ್ವಂತರಿ ಆಸ್ಪತ್ರೆ, ವಿಜಯಪುರ ಎಂದು ಗುರುತಿಸಲಾಗಿದೆ.
ಈ ಕುರಿತು ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ರೆಮ್‍ಡಿಸಿವರ್ ಅಂಬುವ ಚುಚ್ಚುಮದ್ದು ಔಷಧಿಯನ್ನು ಅಪ್ರಮಾಣಿಕವಾಗಿ ಪಡೆದುಕೊಂಡು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ, ಸಿಬ್ಬಂದಿ ಜನರ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.