ಕಾಳ ಸಂತೆಯಲ್ಲಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದ 290 ಕೆಜಿ ಪಡಿತರ ಅಕ್ಕಿ ಜಪ್ತಿ

ಕಲಬುರಗಿ,ಮೇ.14-ನಗರದ ಸೇವಾಲಾಲ್ ಚೌಕ್ ಹತ್ತಿರದ ರಾಜೀವಗಾಂಧಿ ನಗರ ಆಶ್ರಯ ಕಾಲೋನಿಯ ಮನೆಯೊಂದರಲ್ಲಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಡಲಾಗಿದ್ದ 30 ಕೆಜಿ ತೂಕದ, 9,860 ರೂ.ಮೌಲ್ಯದ 290 ಕೆಜಿ ಪಡಿತರ ಅಕ್ಕಿಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕಾಳ ಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಪಾಟೀಲ ಅವರು ದಾಳಿ ನಡೆಸಿ ಈ ಅಕ್ಕಿ ಜಪ್ತಿ ಮಾಡಿಕೊಂಡು ರಾಜೀವಗಾಂಧಿ ನಗರ ಆಶ್ರಯ ಕಾಲೋನಿಯ ಬಾಬುರಾವ ಚವ್ಹಾಣ್ ಮತ್ತು ಭರತ್ ಕಾಲೋನಿಯ ಶರಣು ಹಿರೇಮನಿ ಎಂಬುವವರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.