ಕಾಳ ಸಂತೆಯಲ್ಲಿ ಮಕ್ಕಳ ಆಹಾರ ಮಾರಾಟ ತಡೆಗೆ ಒತ್ತಾಯ

ಕೋಲಾರ,ನ.೧೫: ತಾಲ್ಲೂಕಿನಾದ್ಯಂತ ಶಿಥಿಲಗೊಂಡಿರುವ ಅಂಗನಾಡಿ ಕೇಂದ್ರಗಳನ್ನು ಅಭಿವೃದ್ದಿಪಡಿಸಬೇಕು ಹಾಗೂ ಮಕ್ಕಳ ಆಹಾರವನ್ನು ಕಾಳಸತೆಯಲ್ಲಿ ಮಾರಾಟ ಮಾಡುವ ದಂದೆಕೋರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಬೇಕೆಂದು ರೈತ ಸಂಘದಿಂದ ಶಿಶು ಅಭಿವೃದ್ದಿ ಕಛೇರಿ ಮುಂದೆ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಹೋರಾಟ ಮಾಡಿ ಶಿಶು ಅಭಿವೃದ್ದಿ ಅಧಿಕಾರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಸಾಂಕ್ರಾಮಿಕ ರೋಗಗಳ ಆರ್ಭಟಕ್ಕೆ ಎರಡು ವರ್ಷಗಳಿಂದ ಮಕ್ಕಳು ಪಾಲಿಗೆ ಶಾಲೆ ಇಲ್ಲದೆ ವಿದ್ಯಭ್ಯಾಸ ಎಂಬುದು ಹಿಮಾಲಯ ಪರ್ವತದ ಶಿಖರದಂತಾಗಿತ್ತು. ಆದರೆ ದೇವರ ಕೃಪೆಯಿಂದ ಶಾಲೆ ತೆರೆದರೆ ಶಾಲೆಯ ಅವ್ಯವಸ್ಥೆ ನೋಡಿ ಪೋಷಕರು ಮಕ್ಕಳ ವಿದ್ಯಾಭ್ಯಾಸ ಇಲ್ಲದಿದ್ದರೂ ಪರವಾಗಿಲ್ಲ ಶಿಥಿಲಗೊಂಡಿರವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಹಿಂದೂ ಮುಂದೆ ಯೋಚನೆ ಮಾಡುವ ಮಟ್ಟಕ್ಕೆ ಅಂಗನವಾಡಿ ಶಾಲೆಗಳು ಹದಗೆಟ್ಟಿದ್ದರೂ ಸರಿಪಡಿಸದ ಸರ್ಕಾರದ ವಿರುದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಐತಂಡಳ್ಳಿ ಮಂಜುನಾಥ ಆಕ್ರೊಷ ವ್ಯಕ್ತಪಡಿಸಿದರು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕಗಳು ಕಳೆದರೂ ಇನ್ನು ಗ್ರಾಮೀಣ ಪ್ರದೇಶದ ಜನರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಜೊತೆಗೆ ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಸಾಹೇಬರು ಕಂಡಂತಹ ಏಕ ರೂಪದ ಶಿಕ್ಷಣ ಕನಸು ಕನಸಾಗೆ ಉಳಿದಿದೆ. ಸರ್ಕಾರಗಳ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಇಂದು ತಾಲ್ಲೂಕಿನಾದ್ಯಂತ ಮಕ್ಕಳ ಭವಿಷ್ಯ ರೂಪಿಸುವ ಅಂಗನವಾಡಿ ಕೇಂದ್ರಗಳು ಸಂರ್ಪೂಣವಾಗಿ ಶಿಥಿಲ ವ್ಯವಸ್ಥೆ ತಲುಪಿದ್ದು, ಪ್ರಾಣಗಳನ್ನು ಅಂಗೈನಲ್ಲಿಟ್ಟುಕೊಂಡು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಪಾಠ ಕೇಳಬೇಕಾದ ಪರಿಸ್ಥಿತಿಯಿಂದ ಪೋಷಕರು ಅಂಗನವಾಡಿಗಳನ್ನು ತಿರಸ್ಕರಿಸಿ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಿಶು ಅಭಿವೃದ್ದಿ ಅಧಿಕಾರಿಗಳು ತಾಲ್ಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳು ಶಿಥಿಲಗೊಂಡಿವೆ ಜೊತೆಗೆ ಕೆಲವು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ ಬಾಡಿಗೆ ಕಟ್ಟಡಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದೇವೆ. ಅಂಗನವಾಡಿ ಕೇಂದ್ರಗಳ ದುರಸ್ಥಿಗೆ ಅವಶ್ಯಕತೆ ಇರುವ ಅನುದಾನವನ್ನು ಬಿಡುಗಡೆಗೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿ ಮತ್ತು ಆಹಾರ ಪದಾರ್ಥ ಕಾಳಸಂತೆಯಲ್ಲಿ ಮಾರಾಟವಾಗುವ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ತಾಲ್ಲೂಕು ಅಧ್ಯಕ್ಷ ಐತಂಡಹಳ್ಳಿ ಮುನ್ನ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಹಸಿರು ಸೇನೆ ತಾ.ಅಧ್ಯಕ್ಷ ಚಲಪತಿ, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಬೂದಿಕೋಟೆ ಹೊಬಳಿ ಅಧ್ಯಕ್ಷ ನಾಗಯ್ಯ, ಬೀಮಗಾನಹಳ್ಳಿ ಮುನಿರಾಜು, ಮಾಲೂರು ತಾ.ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಬಾಬಾಜಾನ್, ತಾ.ಪ್ರ.ಕಾರ್ಯದರ್ಶಿ ಮರಗಲ್ ಮುನಿಯಪ್ಪ, ಗೌಸ್‌ಪಾಷ, ಜಾವೀದ್, ನವಾಜ್, ಬಾಬಾಜಾನ್, ರಾಮಸಾಗರ, ವೇಣುಗೋಪಾಲ್, ಮನೋಹರ್, ಸಂದೀಪ್, ವಕ್ಕಲೇರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ,