ಕಾಳೆ ಸಂಶಯಾಸ್ಪದ ಸಾವು: ಪೊಲೀಸ್ ಸಿಬ್ಬಂದಿಅಮಾನತಿಗೆ ಒತ್ತಾಯ

ಕಲಬುರಗಿ,ಆ 29: ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ನಡೆಸಿದಹಲ್ಲೆಯಿಂದಾಗಿ ಅನುಮಾಸ್ಪದವಾಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿರುವಶರಣಸಿರಸಗಿಯ ಉದಯಕುಮಾರ್ ಘನ್ನು ಕಾಳೆ ಸಾವಿಗೆ ಸಂಬಂಧಿಸಿದಂತೆಕರ್ತವ್ಯ ಲೋಪ ಎಸಗಿದ ಪೊಲೀಸ್ ಸಿಬ್ಬಂದಿಯನ್ನು ಕೂಡಲೆ ಅಮಾನತುಮಾಡಬೇಕೆಂದು ಸತ್ಯಶೋಧಕ ಸಮಿತಿಯ ಮುಖಂಡರಾದಸೂರ್ಯಕಾಂತ ನಿಂಬಾಳಕರ್ ಹಾಗೂ ಎ.ಬಿ.ಹೊಸಮನಿ ಒತ್ತಾಯಿಸಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಮೃತ ಕಾಳೆಯ ಪತ್ನಿ ವಿಮಲಾಬಾಯಿ ತನ್ನ ಗಂಡನನ್ನುಅಶೋಕ ನಗರ ಪಿಎಸ್‍ಐ ಹಾಗೂ ಕೆಲವು ಪೇದೆಗಳು ಹಲ್ಲೆ ನಡೆಸಿ
ಕೊಂದಿದ್ದಾರೆ ಎಂದು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಅಡಿ ದೂರು ದಾಖಲಿಸಿದ್ದರು. ಹೀಗೆ ದೂರು ದಾಖಲಾದ ಬಳಿಕ ಪ್ರಕರಣವನ್ನು ಸಿಐಡಿತನಿಖೆ ಒಪ್ಪಿಸಲಾಗಿದೆ. ಸಿಐಡಿ ತನಿಖಾಧಿಕಾರಿಗಳು ಹಾಗೂ ನಾಲ್ಕನೇ ಜೆಎಂಎಫ್‍ಸಿ ನ್ಯಾಯಾಧೀಶರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇಷ್ಟಾದರೂಪ್ರಕರಣದಲ್ಲಿ ತಪ್ಪು ಎಸಗಿರುವ ಪೊಲೀಸ್ ಸಿಬ್ಬಂದಿಯನ್ನುಅಮಾನತುಪಡಿಸದೆ ಅವರನ್ನು ರಕ್ಷಿಸಲಾಗುತ್ತಿದೆ ಎಂದು ನಿಂಬಾಳಕರ್ ಹಾಗೂ ಹೊಸಮನಿ ಟೀಕಿಸಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತರು ಹೇಳಿಕೆಯೊಂದನ್ನು ನೀಡಿದ್ದು,
ಉದಯಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದಿದ್ದಾರೆ. ಆ
ಮೂಲಕ ಮಾಧ್ಯಮದ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಉದಯಕುಮಾರ್‍ಬೆಳಗಿನ ಜಾವದಲ್ಲಿ ಮೃತಪಟ್ಟಿದ್ದರೂ, ಸಂಜೆಯವರೆಗೆ ಪ್ರಕರಣದಾಖಲಿಸಿಕೊಳ್ಳದೆ ವ್ಯವಸ್ಥಿತವಾಗಿ ವಿಳಂಬ ನೀತಿ ಅನುಸರಿಸಲಾಗಿದೆ. ಹೀಗೆಉದ್ದೇಶಪೂರ್ವಕವಾಗಿಯೇ ತಪ್ಪು ಮಾಡಿದ ಪಿಎಸ್‍ಐ ಹಾಗೂ ಪೇದೆಗಳಿಗೆಸ್ವತಃ ಪೊಲೀಸ್ ಆಯುಕ್ತರು ರಕ್ಷಣೆ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಸಂಸ್ಥೆಯ ವರದಿ,ಮರಣೋತ್ತರ ಪರೀಕ್ಷಾ ವರದಿ, ಪ್ಯಾಥೋಲಜಿ ರಿಪೋರ್ಟ್ (ರೋಗಅಧ್ಯಯನ), ಸಿಐಡಿ ವರದಿ ಹಾಗೂ ನ್ಯಾಯಾಂಗದ ವರದಿಗಳನ್ನುಬಹಿರಂಗಪಡಿಸುವುದು ಕೂಡ ಉದ್ದೇಶಪೂರ್ವಕವಾಗಿಯೇ ವಿಳಂಬಮಾಡಲಾಗುತ್ತಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.
ಕೂಡಲೇ ತಪ್ಪೆಸಗಿರುವ ಪೊಲೀಸ್ ಇನ್ಸ್‍ಪೆಕ್ಟರ್ ಹಾಗೂ ಪೇದೆಗಳನ್ನು
ಅಮಾನತುಗೊಳಿಸಿ ಅವರ ವಿರುದ್ಧ ದಲಿತರ ವಿರುದ್ಧದ ಅಟ್ರಾಸಿಟಿ ಕಾಯ್ದೆ
ಅಡಿಯಲ್ಲಿ ಎಫ್‍ಐಆರ್ ದಾಖಲಿಸಬೇಕು. ಸಂತ್ರಸ್ತ ಉದಯಕುಮಾರ್ ಕಾಳೆ
ಕುಟುಂಬಕ್ಕೆ ಸರಕಾರದಿಂದ ಅಗತ್ಯ ಪರಿಹಾರ ಕಲ್ಪಿಸಿ, ಕುಟುಂಬದ ಓರ್ವ ಅರ್ಹಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು. ಇಲ್ಲದೆ ಹೋದರೆ ಮುಂಬರುವದಿನಗಳಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸುವುದು
ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಶ್ರವಣಕುಮಾರ್, ವಿಮಲಾಬಾಯಿ ಉದಯಕುಮಾರ್ ಕಾಳೆ, ಅನಿಲ್ ಭರಣಿಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.