ಕಾಳೆಬೆಳಗುಂದಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

ಗುರುಮಠಕಲ್:ಆ.6: ತಾಲೂಕಿನ ಕಾಳೆಬೇಳಗುಂದಿ ಗ್ರಾಮದಲ್ಲಿ ನೀರಿಗಾಗಿ ಕಳೆದ ಎರಡು ಮೂರು ತಿಂಗಳುಗಳಿಂದ ನೀರಿಗಾಗಿ ಪರದಾಟ ಪಡುವಂತಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಕಾಳೆಬೇಳಗುಂದಿ ಗ್ರಾಮ ಘಟಕದ ವತಿಯಿಂದ ತಾಲೂಕ ಅಧ್ಯಕ್ಷರಾದ ನಾಗೇಶ್ ಗದ್ದಿಗಿ ರವರ ಆದೇಶದ ಮೇರೆಗೆ ಅಲ್ಲಿನ ಗ್ರಾಮ ಪಂಚಾಯತ್ ಮುಂದುಗಡೆ ಪ್ರತಿಭಟನೆ ನಡೆಸಿದರು…ಬಳಿಕ ಪದಾಧಿಕಾರಿಗಳು ಅದ ತಾಯಪ್ಪ ಚೆಲಿಮೇಲಿ ಮಾತನಾಡಿ ಇಲ್ಲಿನ ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ಈ ಹಿಂದೆ ಇಲ್ಲಿನ ನೀರಿನ ಸಮಸ್ಯೆ ಕುರಿತು ಹಲವು ಬಾರಿ ಮನವಿ ಮಾಡಿದರು ಸಹ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದು ಸಮಯಕ್ಕೆ ಸರಿಯಾಗಿ ಕಾರ್ಯಾಲಯಕ್ಕೆ ಬರದೆ ಸ್ಥಳೀಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡದೆ ವಾರಕ್ಕೆ ಒಂದು ಎರಡು ಬಾರಿ ಬಂದು ಹೋಗುತ್ತಿದ್ದು ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ನಿರ್ಲಕ್ಯ ತೋರುತ್ತಿದ್ದಾರೆ ಅದ ಕಾರಣ ತಾವುಗಳು ಈ ಕೂಡಲೇ ಸ್ಥಳೀಯರಿಗೆ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು ಈ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಮಾನ್ಯ ತಾಲೂಕ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ಎಸ್ ಎಸ್ ,ಕಾದ್ರೊಳ್ಳಿ ರವರು ಪ್ರತಿಭಟನೆ ಸ್ಥಳಕ್ಕೆ ಧಾವಿಸಿ ಮನವಿಯನ್ನು ಸ್ವೀಕರಿಸಿ ಇಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.. ಈ ಪ್ರತಿಭಟನೆಯಲ್ಲಿ ಸಂಘಟನೆಯ ಗ್ರಾಮ ಘಟಕದ ಹಂಗಾಮಿ ಅಧ್ಯಕ್ಷ ಅಂಜಪ್ಪ ನಾಯಕ, ಉಪಾಧ್ಯಕ್ಷ ತಾಯಪ್ಪ ಚೆಲಿಮೇಲಿ, ವೀರೇಶ್ ಚೆಲಿಮೇಲಿ, ರವಿ ಯಾದವ್,ಅಂಜಪ್ಪ ಯಾದವ್, ಬನ್ನಪ್ಪ, ರಾಜು ಪಿಜಿ, ನಿಂಗೂ ನಾಯಕ್, ಬನ್ನಪ್ಪ ಚೆಲಿಮೇಲಿ, ಅಶೋಕ್,ವೀರೇಶ್ ನಾಯಕ್, ಶಿವಲಿಂಗ ಎಸ್ ಕೆ, ಭೀಮು,ವೆಂಕಟೇಶ್ ಭಾಗ್ಲಿ, ಅನಿಲ್ ಕುಮಾರ್, ರಾಘವೇಂದ್ರ ಯಾದವ್,ಬಸವರಾಜ್, ಮಲ್ಲಯ್ಯ ಸುರೇಶ್, ಬನ್ನಪ್ಪ ನಾಯಕ್, ಸೇರಿದಂತೆ ಸಂಘಟನೆಯ ಹಲವು ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.