ಕಾಳೆತಿಮ್ಮನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ

ಪಿರಿಯಾಪಟ್ಟಣ ಆ.02:- ತಾಲ್ಲೂಕಿನಲ್ಲಿ ಈಗಾಗಲೇ ನಿಮ್ಮ ಗ್ರಾಮದ ಸಹಕಾರ ಸಂಘ ಸೇರಿದಂತೆ ಒಟ್ಟು 186 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಮುಂದಿನ ದಿನಗಳಲ್ಲಿ 200 ಸಹಕಾರ ಸಂಘದ ಸ್ಥಾಪನೆಯ ಗುರಿ ಹೊಂದಿದ್ದೇನೆ ಎಂದು ಮೈಮುಲ್ ಅಧ್ಯಕ್ಷ ಪಿ ಎಂ ಪ್ರಸನ್ನ ಭರವಸೆ ನೀಡಿದರು ಅವರು ತಾಲ್ಲೂಕಿನ ಕಾಳೆ ತಿಮ್ಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಈಗಾಗಲೇ ಮೈಮುಲ್ ನಲ್ಲಿ ಹಾಲು ಉತ್ಪಾದಕರಿಗೆ 29ರೂ ಗಳನ್ನು ಪ್ರತಿ ಲೀಟರ್ ಗೆ ನೀಡುತ್ತಿದ್ದು ಪ್ರತಿ ವರ್ಷ ಒಕ್ಕೂಟಕ್ಕೆ ಅಂದಾಜು 29 ಕೋಟಿ ನಷ್ಟ ಸಂಭವಿಸುತ್ತಿದ್ದು ನನ್ನ ಅವಧಿಯಲ್ಲಿ ನಷ್ಟದ ಪ್ರಮಾಣ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಒಕ್ಕೂಟದ ಆದಾಯ ಗಣನೀಯವಾಗಿ ಹೆಚ್ಚಿಸುವಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ ಎಂದರು .
ರೈತರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿದಲ್ಲಿ ನಿಮ್ಮ ಆರ್ಥಿಕ ಮಟ್ಟವು ಹೆಚ್ಚುವುದರ ಜೊತೆಗೆ ಒಕ್ಕೂಟದ ಆರ್ಥಿಕ ವ್ಯವಸ್ಥೆಯು ಸುಧಾರಣೆಯಾಗುತ್ತದೆ ಎಂದ ಪ್ರಸನ್ನ ಈಗಾಗಲೇ ತಾಲ್ಲೂಕಿನಾದ್ಯಂತ ಎಲ್ಲಾ ಸಹಕಾರ ಸಂಘಗಳಿಗೆ ಕಟ್ಟಡಕ್ಕೆ ಕಂಪ್ಯೂಟರ್ ಬಳಕೆಗೆ ಒಕ್ಕೂಟದಿಂದ ಸಹಕಾರ ನೀಡುತ್ತಿದ್ದು ಮುಂದಿನ ವರ್ಷದಿಂದ ನಿಮ್ಮ ಸಂಘಕ್ಕೂ ಒಕ್ಕೂಟದಿಂದ ಎಲ್ಲಾ ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಈ ಹಿಂದೆ ಒಕ್ಕೂಟದಿಂದ ಪ್ರತಿಯೊಬ್ಬ ರೈತನಿಗೆ ಮೂವತ್ತು ಸಾವಿರದ ರೂ ಗಳಿದ್ದ ವಿಮಾ ಯೋಜನೆ ಈಗ 1ಲಕ್ಷಕ್ಕೆ ಏರಿಕೆಯಾಗಿದ್ದು ಹಸುಗಳಿಗೆ 50/:ರೈತರು ಭರಿಸಿದರೆ ಉಳಿಕೆ ಐವತ್ತು%ಒಕ್ಕೂಟ ಕಟ್ಟಿಕೊಡುತ್ತಿದ್ದು ಇದನ್ನು 3ವರ್ಷಕ್ಕೆ ವಿಸ್ತರಣೆ ಮಾಡಿರುವುದಾಗಿ ತಿಳಿಸಿದರು
ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ಹುಲ್ಲು ಕಟಾವು ಮಾಡುವ ಯಂತ್ರ ಮ್ಯಾಟು ಸೇರಿದಂತೆ ಒಕ್ಕೂಟದಿಂದ ಹಲವು ಸೌಲಭ್ಯಗಳು ದೊರೆಯುತ್ತಿದ್ದು ರೈತರು ಇದರ ಸದುಪಯೋಗ ಮಾಡುವಂತೆ ಕರೆ ನೀಡಿದರು ಈಗಾಗಲೇ ತಾಲ್ಲೂಕಿನಾದ್ಯಂತ ಎರಡೂವರೆ ಸಾವಿರ ರೈತರಿಗೆ ಹಸು ವಿತರಣೆ ಮಾಡುವ ಯೋಜನೆ ಮುಂದಿದ್ದು ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಬಳಿ ಹನ್ನೆರಡೂವರೆ ಎಕರೆ ಪ್ರದೇಶದಲ್ಲಿ ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಬಳಿ ಹನ್ನೆರಡೂವರೆ ಎಕರೆ ಪ್ರದೇಶದಲ್ಲಿ ನೂರು ಕೋಟಿ ರೂ ವೆಚ್ಚದಲ್ಲಿ ಹಸುಗಳ ಫೀಡ್ಸ್ ಫ್ಯಾಕ್ಟರಿ ಯೋಜನೆ ಸದ್ಯದಲ್ಲೇ ಲೋಕರ್ಪಣೆಯಾಗಲಿದೆ ಎಂದರು.
ಸಮಾರಂಭದಲ್ಲಿ ಕಾಳೆ ತಿಮ್ಮನಹಳ್ಳಿ ಹಾಲು ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ . ಕಾರ್ಯದರ್ಶಿ ದೇವಿಪ್ರಸಾದ್ .ಮೈಮುಲ್ ನಿರ್ದೇಶಕ ಎಚ್. ಡಿ .ರಾಜೇಂದ್ರ .ಮುತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಾಜಿ .ಮುಖಂಡರುಗಳಾದ ನಂದೀಶ್. ಜಗದೀಶ್. ಚೆಂಗಪ್ಪ. ಸತೀಶ್. ಗಿರೀಶ್ .ಅಸ್ಲಾಂ ಪಾಷಾ ಶೇಷಗಿರಿ ಮಂಜೇಶ ವಿ.ಟಿ ಸತೀಶ್ ಕನ್ಯಾಪ .ಸೇರಿದಂತೆ ಗ್ರಾಮದ ಮುಖಂಡರುಗಳು ಹಾಜರಿದ್ದರು.