ಕಾಳುಗಳ ಸ್ನ್ಯಾಕ್

ಬೇಕಾಗುವ ಪದಾರ್ಥಗಳು:

 • ಎಣ್ಣೆ – ೫ ಚಮಚ
 • ಸಾಸಿವೆ – ೧ ಚಮಚ
 • ಈರುಳ್ಳಿ – ೨
 • ಟೊಮೊಟೊ ೨
 • ಕರಿಬೇವು – ಸ್ವಲ್ಪ
 • ಅರಿಶಿನ – ಅರ್ಧ ಚಮಚ
 • ಬಟಾಣಿಕಾಳು, ಅಲಸಂದೆಕಾಳು, ಹೆಸರುಕಾಳು (ಎಲ್ಲಾ ಸೇರಿ) – ೨ ಲೋಟ
 • ಉಪ್ಪು – ರುಚಿಗೆ ತಕ್ಕಷ್ಟು
 • ಸಕ್ಕರೆ – ೧ ಚಮಚ
 • ಅಚ್ಚಖಾರದಪುಡಿ – ೧ ಚಮಚ
 • ಜೀರಾಪುಡಿ – ಅರ್ಧ ಚಮಚ
 • ಧನಿಯಾಪುಡಿ – ಅರ್ಧ ಚಮಚ
 • ಗರಂಮಸಾಲ (ಬಾದ್ ಷಾ) – ಅರ್ಧ ಚಮಚ
 • ನಿಂಬೆರಸ – ೧ ಹೋಳು
 • ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
 • ತುಪ್ಪ – ೧ ಚಮಚ
  ವಿಧಾನ: ಎಣ್ಣೆಗೆ ಸಾಸಿವೆ ಹಾಕಿ ಸಿಡಿದ ಮೇಲೆ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಟೊಮೊಟೊ, ಕರಿಬೇವು, ಅರಿಶಿನ ಹಾಕಿ ಬಾಡಿಸಿ, ಮೆತ್ತಗಾದ ಮೇಲೆ ಬೆಂದ ಬಟಾಣಿಕಾಳು, ಅಲಸಂದೆಕಾಳು, ಉಪ್ಪು, ಸಕ್ಕರೆ, ಅಚ್ಚಖಾರದಪುಡಿ, ಜೀರಾಪುಡಿ, ಧನಿಯಾಪುಡಿ, ಗರಂಮಸಾಲ ಹಾಕಿ ಬಾಡಿಸಿ ಇಳಿಸಿ, ಇದರ ಮೇಲೆ ನಿಂಬೆರಸ, ಕೊತ್ತಂಬರಿಸೊಪ್ಪು, ತುಪ್ಪ, ಚಿಕ್ಕದಾಗಿ ಹೆಚ್ಚಿದ ಹಸಿಈರುಳ್ಳಿ ಮತ್ತು ಟೊಮೊಟೊ ಹಾಕಿ ಕಲೆಸಿ ತಿಂದರೆ ತುಂಬಾರುಚಿ.
  (ಇದೇ ರೀತಿ ಕಪ್ಪುಕಡಲೆ, ಕಾಬೂಲ್ ಕಡಲೆ, ಹುರಳಿಕಾಳು ಇವುಗಳಲ್ಲಿ ಯಾವುದಾದರೊಂದನ್ನು ಬಳಸಿ ಮಾಡಬಹುದು.)