’ಕಾಳಿ’ ನಿರ್ದೇಶಕಿ ಲೀನಾರ ಬದುಕಿನ ಕಥೆ: ತಂದೆ ಪಿಎಚ್‌ಡಿ ಮಾಡುತ್ತಿದ್ದ ನಿರ್ದೇಶಕರನ್ನೇ ಮಗಳು ಪ್ರೀತಿಸಿದಳು!

ಫಿಲ್ಮ್ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಕಾಳಿ ಸಾಕ್ಷ್ಯಚಿತ್ರದಲ್ಲಿ ತಾಯಿ ಕಾಳಿ ಸಿಗರೇಟ್ ಸೇದುತ್ತಿರುವ ಪೋಸ್ಟರ್ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೋಸ್ಟರ್‌ನಲ್ಲಿ ಒಂದು ಕೈಯಲ್ಲಿ ಮಾತೆ ಕಾಳಿಯ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಎಲ್ ಜಿ ಬಿ ಟಿ ಕ್ಯೂ ಧ್ವಜವನ್ನು ತೋರಿಸಲಾಗಿದೆ. ಇದು ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ. ಅದರ ಪೋಸ್ಟರ್ ಬಿಡುಗಡೆಯಾದ ತಕ್ಷಣ, ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಕೋಪ ಭುಗಿಲೆದ್ದಿತು ಮತ್ತು ಜನರು ಲೀನಾ ಅವರನ್ನು ಬಂಧಿಸುವಂತೆ ಒತ್ತಾಯಿಸಲು ಪ್ರಾರಂಭಿಸಿದರು. ಆದರೆ ಲೀನಾ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರ ಕೆಲವು ಫಿಲ್ಮ್ ಗಳು ವಿವಾದಗಳಿಂದ ಸುತ್ತುವರಿದಿವೆ. ವಿವಾದಗಳ ಹೊರತಾಗಿ, ಲೀನಾ ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಸಂಘರ್ಷಗಳನ್ನು ಕಂಡಿದ್ದಾರೆ.
ಮಧುರೈನ ದಕ್ಷಿಣದಲ್ಲಿರುವ ಮಹಾರಾಜಪುರಂ ಎಂಬ ದೂರದ ಹಳ್ಳಿಯಲ್ಲಿ ಲೀನಾ ಜನಿಸಿದರು. ಅವರ ತಂದೆ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು. ಲೀನಾ ಅವರ ಹಳ್ಳಿಯಲ್ಲಿ ಒಂದು ಪದ್ಧತಿ ಇತ್ತು, ಹುಡುಗಿ ಹದಿಹರೆಯಕ್ಕೆ ಬಂದ ತಕ್ಷಣ ಅವಳ ಮಾವನೊಂದಿಗೆ ಮದುವೆ ಮಾಡಲಾಗುವುದು. ಈ ವಿಷಯ ತಿಳಿದ ಲೀನಾ ಮನೆಯಿಂದ ಓಡಿ ಚೆನ್ನೈಗೆ ಬಂದು ತಮಿಳು ನಿಯತಕಾಲಿಕೆ ವಿಕಟನ್‌ನಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿದರು. ನಿಯತಕಾಲಿಕೆಯವರು ಲೀನಾರ ಮನೆಯ ವಿಳಾಸವನ್ನು ಕಂಡು ಅವರನ್ನು ಮನೆಗೆ ವಾಪಸ್ ಕಳುಹಿಸಿದರು. ಮನೆಗೆ ಬಂದ ನಂತರ ಲೀನಾ ತನ್ನ ಪೋಷಕರ ಮನವೊಲಿಸಿ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆದರು.ಆದರೆ ಲೀನಾರ ತಂದೆ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ ನಿಧನರಾದರು.
ಇದೀಗ ಲೀನಾ ಅಭಿನಯದ ಕಾಳಿ ಸಾಕ್ಷ್ಯ ಚಿತ್ರದ ಪೋಸ್ಟರ್ ಬಿಡುಗಡೆಯಾದ ತಕ್ಷಣ ಚರ್ಚೆಗೆ ಗ್ರಾಸವಾಗಿದೆ.
೪೦ ವರ್ಷ ಮೇಲ್ಪಟ್ಟ ನಿರ್ದೇಶಕರ ಜೊತೆ ಪ್ರೀತಿಯಲ್ಲಿ ಬಿದ್ದರು:
ಲೀನಾ ಅವರ ತಂದೆ ತೀರಿಕೊಂಡಾಗ ಅವರು ತಮಿಳು ಚಲನಚಿತ್ರ ನಿರ್ಮಾಪಕ ನಿರ್ದೇಶಕ ಭಾರತಿರಾಜಾ ಅವರ ಕುರಿತು ಪಿಎಚ್‌ಡಿ ಮಾಡುತ್ತಿದರು. ಲೀನಾ ಅವರಿಗೆ ಈ ವಿಷಯ ತಿಳಿದಾಗ, ಅವರು ಪ್ರಬಂಧವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಬಯಸಿದ್ದರು. ಇದಕ್ಕಾಗಿ ಚೆನ್ನೈಗೆ ತೆರಳಿ ನಿರ್ದೇಶಕ ಭಾರತಿ ರಾಜಾ ಅವರನ್ನು ಭೇಟಿ ಮಾಡಿದ್ದರು. ಆದರೆ ಮೊದಲ ಭೇಟಿಯಲ್ಲಿಯೇ ಲೀನಾ ಭಾರತಿರಾಜಾರನ್ನು ಪ್ರೀತಿಸಲು ಶುರುಮಾಡಿದರು ಮತ್ತು ಅವರ ಸಂಬಂಧದ ಸುದ್ದಿ ಹೊರ ಬರಲು ಪ್ರಾರಂಭಿಸಿತು. ಇಬ್ಬರೂ ಪ್ರೀತಿಸಿದಾಗ ಅವರ ವಯಸ್ಸಿನಲ್ಲಿ ೪೦ ವರ್ಷಗಳ ಅಂತರವಿತ್ತು.
ಇತ್ತ ಮಗಳ ಸಂಬಂಧದ ಸುದ್ದಿ ಹೊರಬೀಳುತ್ತಿದ್ದಂತೆಯೇ ಲೀನಾರ ತಾಯಿ ಊಟತಿಂಡಿ ನಿಲ್ಲಿಸಿದ್ದರು. ಈ ವಿಷಯ ತಿಳಿದ ತಕ್ಷಣ ಲೀನಾ ಸಿನಿಮಾ ಹಾಗೂ ಭಾರತಿರಾಜಾ ಇಬ್ಬರನ್ನೂ ಬಿಟ್ಟು ಮನೆಗೆ ವಾಪಾಸ್ ಬಂದರು.
ಲೀನಾ ಅವರು ಮೊದಲ ಫಿಲ್ಮ್ ನ ಚಿತ್ರೀಕರಣಕ್ಕಾಗಿ ೧ ಲಕ್ಷ ರೂಪಾಯಿಯ ಸರಕುಗಳನ್ನು ಖರೀದಿಸಿದ್ದರು.ಸೆಂಗ್ಡಾಲ್ ಫಿಲ್ಮ್ ಗೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿತ್ತು:
ಲೀನಾ ೨೦೦೨ ರಲ್ಲಿ ತನ್ನ ಚೊಚ್ಚಲ ಫಿಲ್ಮ್ ಮಾಥಮ್ಮನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.ಅದನ್ನು ಅವರು ೨೦೦೩ ರಲ್ಲಿ ಬಿಡುಗಡೆ ಮಾಡಿದರು. ಇದರ ನಂತರ ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಮುಂದುವರೆಸಿದರು ಮತ್ತು ಸಮಾಜದಲ್ಲಿನ ಶೋಷಣೆಯ ವಿರುದ್ಧ ಚಲನಚಿತ್ರಗಳನ್ನು ಮಾಡುವುದನ್ನು ಮುಂದುವರೆಸಿದರು. ಆದರೆ ೨೦೧೧ ರಲ್ಲಿ, ಅವರು ತಮ್ಮ ವೃತ್ತಿಜೀವನದ ಮೊದಲ ಚಲನಚಿತ್ರವಾದ ಸೆಂಗ್ಡಾಲ್ ನ್ನು ಮಾಡಿದರು. ಇದು ವಿವಾದಗಳಿಂದ ಸುತ್ತುವರಿದಿತ್ತು. ಫಿಲ್ಮ್ ಧನುಷ್ಕೋಡಿಯ ಮೀನುಗಾರರ ಜೀವನವನ್ನು ಆಧರಿಸಿದೆ. ಇದರ ವಿವಾದ ಎಷ್ಟು ಹೆಚ್ಚಾಯಿತು ಎಂದರೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿತು. ಫಿಲ್ಮ್ ನ್ನು ನೋಡಿದ ನಂತರ ಸೆನ್ಸಾರ್ ಮಂಡಳಿಯು ಸೆಂಗ್ಡಾಲ್ ಭಾರತ ಮತ್ತು ಶ್ರೀಲಂಕಾ ಸರ್ಕಾರದ ಮೇಲೆ ಅವಹೇಳನಕಾರಿ ಮತ್ತು ರಾಜಕೀಯ ಕಾಮೆಂಟ್ ಗಳನ್ನು ಮಾಡಿದ್ದಾರೆ ಎಂದು ಹೇಳಿತು. ಇದಲ್ಲದೆ, ಅವರ ೨೦೧೩ ಫಿಲ್ಮ್ ವೈಟ್ ವ್ಯಾನ್ ಸ್ಟೋರೀಸ್ ಕೂಡ ವಿವಾದಗಳಲ್ಲಿ ಸಿಲುಕಿತ್ತು.