ಕಾಳಿಹುಂಡಿ ಶಿವಕುಮಾರ್‍ಗೆ ಕರುನಾಡಿನ ಸ್ವರ ಮಧುರ ಪ್ರಶಸ್ತಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.27- ಲೇಖಕ, ವಿಮರ್ಶಕ, ಮೈಸೂರಿನ ಕಾಳಿಹುಂಡಿ ಶಿವಕುಮಾರ್‍ರವರಿಗೆ ಕರುನಾಡಿನ ಸ್ವರ ಮಧುರ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಝೇಂಕಾರ ಸ್ವರ ಮಧುರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಸ್ಥೆಯು ಬುದ್ಧಜಯಂತಿಯ ಪ್ರಯುಕ್ತ ವಾಟ್ಸಾಪ್ ಬಳಗದಲ್ಲಿ ನಡೆಸಿದ ಭಕ್ತಿಗೀತೆಗಾಯನದಲ್ಲಿ ಭಾಗವಹಿಸಿ, ಅತ್ಯುತ್ತಮ ಸ್ಥಾನದೊಂದಿಗೆ ಕರುನಾಡಿನ ಸ್ವರ ಮಧುರ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಈ ಕಾರ್ಯಕ್ರಮದ ತೀರ್ಪನ್ನು ಗೌರಿಶಂಕರ ಚಟ್ಟಿ, ಪ್ರಾಂಶುಪಾಲರು, ಸ್ವರ ಮಧುರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ, ಬೆಂಗಳೂರು ರವರು ನೀಡಿದ್ದಾರೆ.
ಈ ಸಂಸ್ಥೆಯು ಹಬ್ಬ ಹರಿದಿನ, ವಿಶೇಷ ಜಯಂತಿ, ಇನ್ನಿತರ ಸಂದರ್ಭಗಳಲ್ಲಿ ಅನೇಕ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಾ ಎಲೆಮರೆಯ ಗಾಯನ ಪ್ರತಿಭೆಗಳನ್ನು ಗುರುತಿಸುತ್ತಾ ಬರುತ್ತಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅತ್ಯುತ್ತಮ ಗಾಯಕರನ್ನು ಆಯ್ಕೆ ಮಾಡಿ ನಿರಂತರವಾಗಿ ಪೆÇ್ರೀತ್ಸಾಹಿಸುತ್ತಿದ್ದಾರೆ.
ಶಿವಕುಮಾರ್ ರವರು ಮೂಲತಃ ನಂಜನಗೂಡಿನ ನಗರಸಭೆಯಲ್ಲಿ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಕಾಶವಾಣಿ ಕಲಾವಿದರು ಸಹ ಆದ ಇವರು, ಪತ್ರಿಕೆಗಳಲ್ಲಿ ಲೇಖನಗಳು ಹಾಗೂ ವಿಮರ್ಶೆಗಳನ್ನು ಬರೆಯುತ್ತಿರುತ್ತಾರೆ.
ಕಾಳಿ ಹುಂಡಿ ಶಿವಕುಮಾರ್ ರವರಿಗೆ ಮತ್ತಷ್ಟು ಗಾಯನ ಪ್ರಶಸ್ತಿಗಳು ಬರಲಿ ಎಂದು ಮೈಸೂರು ಆಕಾಶವಾಣಿ ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷ ಕಣ್ಣೂರು ವಿ.ಗೋವಿಂದಾಚಾರಿ ಆಶಿಸಿದ್ದಾರೆ.