ಕಾಳಿಕಾ ದೇವಿ ಜಾತ್ರೆಯಂಗವಾಗಿ ಪಲ್ಲಕ್ಕಿ ಉತ್ಸವ

?????????????????????????????????????????????????????????????????????????????????????????????????????????????????????????????????????????????????????????????????????????????????????????

ಮುದ್ದೇಬಿಹಾಳ:ಎ.18: ಕಾಳಿಕಾ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಪಟ್ಟಣದ ಕಿಲ್ಲಾದಲ್ಲಿರುವ ಕಾಳಿಕಾ ದೇವಿ ದೇವಸ್ಥಾನದಿಂದ ವಿವಿಧ ಬಾಜಾ ಭಜಂತ್ರಿಯೊಂದಿಗೆ ದೇವಿಯ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಹುಡ್ಕೋ ಬಡಾವಣೆಯ ವಿಶ್ವಕರ್ಮರ ದೇವಸ್ಥಾನಕ್ಕೆ ತೆರಳಿ ವಿವಿಧ ಪ್ರಮುಖ ಬಜಾರ ರಸ್ತೆ ಮಾರ್ಗವಾಗಿ ದೇವಸ್ಥಾನಕ್ಕೆ ಮರಳಿತು.
ಬಳಿಕ ದೇವಿಗೆ ಮಹಾ ಮಂಗಳಾರತಿ ಅನ್ನ ಪ್ರಸಾದ ನೇರವೇರಿತು ಈ ವೇಳೆ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಮಾನಪ್ಪ ತಮದಡ್ಡಿ ಅವರು ಮಾತನಾಡಿ ಪಂಚಕಸುಬುಗಳ ಮೂಲಕ ಇಡಿ ಜಗತ್ತಿಗೆ ವಿಶ್ವಕರ್ಮರು ಮಾದರಿಯಾಗಿದ್ದಾರೆ ಮಾತ್ರವಲ್ಲದೇ ಈ ದೇಶಕ್ಕೆ ಅಪಾರ ಕೊಡಗೆ ನೀಡಿದ್ದಾರೆ. ವಿದ್ಯೆಯಲ್ಲಿ ಅಪಾರ ಜ್ಞಾನವಂತರಾಗಿದ್ದರೂ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಕವಾಗಿ ತೀರಾ ಹಿಂದುಳಿದ ಸಮಾಜವಾಗಿದೆ. ಸರಕಾರ ಸೌಲಭ್ಯಗಳನ್ನು ಪಡೆದು ತಮ್ಮ ಮಕ್ಕಳನ್ನು ಉನ್ನತಮಟ್ಟದ ಗುಣಮಟ್ಟ ಶಿಕ್ಷಣ ಕೊಡಿಸುವ ಮೂಲಕ ಅತ್ಯನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಬೇಕು ಅಂದಾಗ ಮಾತ್ರ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.
ಸಧ್ಯ ಎಲ್ಲೇಡೆ ಕೋರೊನಾ ರೋಗದಿಂದ ಇಡೀ ದೇಶ ರಾಜ್ಯವೇ ತತ್ತರಿಸಿ ಹೋಗುತ್ತಿದೆ ಕಾರಣ ಎಲ್ಲರೂ ಸರಕಾರದ ಸಲಹೇ ಸೂಚನೆ ಹಾಗೂ ನಿಯಮಗಳನ್ನು ಪಾಲಿಸುವುದರ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋರೋನಾ ಹರಡದಂತೆ ಮುಂಜಾಗೃತ ಕ್ರಮ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮನೋಹರ ಶಿರವಾಳ, ಅಶೋಕ ಪತ್ತಾರ (ಬಳಬಟ್ಟಿ) ಚಂದ್ರಶೇಖರ ಪತ್ತಾರ, ಮಳಿಯಪ್ಪ ಪತ್ತಾರ, ತಾಲೂಕಾ ಅಧ್ಯಕ್ಷ ಮಲ್ಲಣ್ಣ ಪತ್ತಾರ, ಕಾರ್ಯದರ್ಶಿ ಈರಣ್ಣ ಬಡಿಗೇರ(ಕೆ ಎಸ್ ಆರ್ ಟಿ ಸಿ,)ಮೌನೇಶ ಹಂದ್ರಾಳ,ಈರಣ್ಣ ಶಿರವಾಳ, ವಿಜಯಕುಮಾರ ಬಡಿಗೇರ, ರಾಘು ಜಾಯಯವಾಡಗಿ, ಈರಣ್ಣ ಕೋಡಿಹಾಳ, ಆನಂಧ ಪತ್ತಾರ, ಶಿವು ನಂದರಗಿ, ಪ್ರಕಾಶ ಕವಡಿಮಟ್ಟಿ, ಕಾಳಪ್ಪ ಹಳ್ಳೂರ, ತಾಲೂಕಾ ಯುವ ಘಟಕದ ಅಧ್ಯಕ್ಷ ರಮೇಶ ತಮದಡ್ಡಿ, ಗುರು ಇಟಗಿ, ಮೌನೇಶ ಇಟಗಿ, ಕರ್ಣೇಶ ಪತ್ತಾರ, ಪುರಸಭೆ ಸದಸ್ಯೇ ಸಹನಾ ಬಡಿಗೇರ, ಕಾಮಾಕ್ಷೀ ನಂದರಗಿ, ವಿಜಯಲಕ್ಷ್ಮೀ ಪತತ್ತಾರ, ಕಲಾವತಿ ಬಡಿಗೇರ ಸೇರಿದಂತೆ ಹಲವರು ಇದ್ದರು.