ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶೇಷಪೂಜೆ

ಕಲಬುರಗಿ,ಮಾ 24: ನಗರದ ಶೇಖರೋಜಾ ಶಹಾಬಜಾರ ಕಾಳಿಕಾದೇವಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಮತ್ತು ಯುಗಾದಿಹಬ್ಬದ ಪ್ರಯುಕ್ತ ಅಫಜಲಪುರ ಕಲಬುರಗಿ ವಿಶ್ವಕರ್ಮ ಜಗದ್ಗುರು ಮೂರುಝಾವಧೀಶ್ವರ ಮಠದ ಪೀಠಾಧಿಪತಿ ಪ್ರಣವ ನಿರಂಜನ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿಶೇಷಪೂಜೆ ಜರುಗಿತು.ಪಾಲಿಕೆ ಸದಸ್ಯ ಸಚಿನ್ ಕಡಗಂಚಿ ಅವರು ಅಧ್ಯಕ್ಷತೆ ವಹಿಸಿದ್ದರು.ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಅವರು ನೇತೃತ್ವ ವಹಿಸಿದರು.ಮುಖಂಡರಾದ ಗುರುನಾಥ ಘಾಣೂರ,ಲಕ್ಷ್ಮೀಕಾಂತ ಶೇಷಗಿರಿ,ಅನಂತ ಶೇಷಗಿರಿ,ಪ್ರಕಾಶ ಶೇಷಗಿರಿ,ವಿಕಾಸ ಶೇಷಗಿರಿ,ಶ್ರೀಶೈಲ,ಸೋಮನಾಥ ಧರ್ಮಾಪುರ,ಲೋಕೇಶ ವಿಶ್ವಕರ್ಮ,ವಿಠ್ಠಲ ವೇದಪಾಠಕ,ಬಾಬುರಾವ ಮೋಳಕೇರಿ,ಅರ್ಜುನ ಸುತಾರ,ಶಾಂತಾಬಾಯಿ ಶೇಷಗಿರಿ,ಪಾರ್ವತಿ ವೇದಪಾಠಕ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.