ಕಾಳಿಕಾದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಸನ್ಮಾನ

ವಿಜಯಪುರ:ಮಾ.10: ವಿಶ್ವಕರ್ಮ ಮಹಿಳಾ ಮಂಡಳಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಸನ್ಮಾನ ಮಾಡುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ವೇ ಬ್ರ ಪ್ರಭಾಕರ ಆಚಾರ್ಯ ಪೂಜಾರ ಬಾಳು ರವೀಂದ್ರ ಗಿರಗಾಂವಕರ ಪ್ರಮೋದ್ ಮ ಬಡಿಗೇರ ಶ್ರೀಕಾಂತ ಮ ಕುಂದನಗಾರ ಹಾಗೂ ಶ್ರೀಮತಿ ಕುಸುಮಾ ಅ ಶಿರವಾಳ ಹಾಗೂ ಇನ್ನಿತರ ಮಹಿಳಾ ಸದಸ್ಯರು ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಮ ಕುಂದನಗಾರ ಇವರು ಮಹಿಳಾ ದಿನಾಚರಣೆಯ ಬಗ್ಗೆ ಹಾಗೂ ನಮ್ಮ ದೇಶ ಹೆಣ್ಣಿಗೆ ಕೊಡುವ ಗೌರವ ಒಬ್ಬ ಗಂಡಿನ ಯಶಸ್ಸಿನ ಹಿಂದೆ ಮಹಿಳೆಯ ಸ್ಪೂರ್ತಿ ಇದ್ದೆ ಇರುತ್ತೆ ಮತ್ತು ಹೆಣ್ಣಿನಲ್ಲಿರುವ ತಾಳ್ಮೆ ಸಹನೆ ಮತ್ತು ನಮ್ಮ ದೇಶದ ರಕ್ಷಣೆ ಮಾಡುವ ವೀರ ಯೋಧರ ಮಡದಿಯರ ಬಗ್ಗೆ ಹಾಗೂ ದೇಶವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮದರಥರೇಸಾ, ಸಾಲುಮರದ ತಿಮ್ಮಕ್ಕ, ಸುಧಾಮೂರ್ತಿ, ಹಾಗೂ ನಮ್ಮ ದೇಶದ ಸ್ವಾತಂತ್ರ್ಯಸ್ಕೂಸ್ಕರ ಮಡಿದ ವೀರರಾಣಿ ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ ರಂತ ಮಹಿಳೆಯರು ಬಗ್ಗೆ ಮಾತನಾಡಿ ಮಹಿಳೆಯರ ಗೌರವ ಹೆಚ್ಚಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಮೀನಾ ಮ ಕುಂದನಗಾರ ನಡೆಸಿದರು. ಈ ಕಾರ್ಯಕ್ರಮದಲ್ಲಿ ಕಾಳಮ್ಮ ಪತ್ತಾರ ಸೀಮಾ ಹೊಸಕೋಟೆ ಮಂಜುಳಾ ಮತ್ತಿಗಿಕರ್ ರೆಡ್ಡೇಕರ್ ರೇಖಾ ಪಂಡಿತ್ ಜ್ಯೋತಿ ಗಿರಿವಾಂಕರ್ ರೋಹಿಣಿ ಗಿರಿಗಾವ್ಕರ್ ಆರ್ತಿ ಬಡಿಗೇರ್ ಇಂದುಮತಿ ಬಿಜಾಪುರ್ಕರ್ ಹಾಗೂ ಇತರ ಇದ್ದರು