
ಹಿರಿಯೂರು ಮೇ.24– ಹಿರಿಯೂರು ನಗರದ ಸುಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಕಾಳಿಕಾಂಬ ಮಾತೆಯ ದೇವಾಲಯದಲ್ಲಿ ಮಂಗಳವಾರ ಮಹಾ ನೈವೇದ್ಯ ದೊಡ್ಡ ಎಡೆ ಸೇವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು , ಇದರ ಅಂಗವಾಗಿ ಶ್ರೀ ಕಾಳಿಕಾಂಬ ಮಾತೆಗೆ ಅರ್ಚನೆ, ಅಭಿಷೇಕ, ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನಡೆಯಿತು.ದೊಡ್ಡ ಎಡೆ ಸೇವೆ ನಂತರ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.