ಕಾಳಾಪೂರ ಗ್ರಾಪಂ ಕಾಂಗ್ರೆಸ್, ಬಿಜೆಪಿಗೆ ಬಾರಿ ಮುಖಭಂಗ ಪಕ್ಷೇತರ ಗೆಲವು

ಲಿಂಗಸೂಗೂರು,ಆ.೦೫- ತಾಲ್ಲೂಕಿನ ಕಾಳಾಪೂರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಬಾರಿ ಮುಖಭಂಗ ಪಕ್ಷೇತರ ಗೆಲವು ಸಾಧಿಸಿತು.
ನಾಡಗೌಡರ ರಾಜಕೀಯ ಚದುರಂಗ ಆಟಕ್ಕೆ ಕಾಂಗ್ರೆಸ್, ಬಿಜೆಪಿಗೆ ಮುಖಭಂಗ* : ದಶಕಗಳ ಕಾಲದಿಂದಲೂ ನಾಡಗೌಡರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ, ಇವರು ಬೆಂಬಲಿಗರು ಅಧ್ಯಕ್ಷ, ಉಪಾಧ್ಯಕ್ಷ ಆಗುತ್ತಾ ಬಂದಿದ್ದರು.
ಆದರೆ ಶುಕ್ರವಾರ ನೆಡೆದ ಚುನಾವಣೆ ಜಿದ್ದಾಜಿದ್ದಿವಾಗಿ ನಡೆಯಿತು. ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಂದಾಗಿ ನಾಡಗೌಡರ ಬೆಂಬಲ ಸದಸ್ಯರನ್ನು ಸೋಲಿಸು ಪಣ ತೊಟ್ಟಿದ್ದರು, ಆದರೆ ನಾಡಗೌಡರ ಬೆಂಬಲಿತ ಸದಸ್ಯರು ಯಾವುದೇ ಭಯಭೀತರಾಗದೆ ಮತ ಚಲಾವಣೆ ಮಾಡಿ ನಾಡಗೌಡರ ಬೆಂಬಲಕ್ಕೆ ಮತ್ತೆ ನಿಂತರು, ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನದಿಂದ ನಾಡಗೌಡ ಬೆಂಬಲಿತ ಸದಸ್ಯ ಶಂಕ್ರಮ್ಮ ಗಂಡ ಶರಣಪ್ಪ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯ ಹುಲಿಗೆಮ್ಮ ಗಂಡ ಬಸಪ್ಪ, ಸಾಮನ್ಯ ಮೀಸಲಾದ ಉಪಾಧ್ಯಕ್ಷ ಸ್ಥಾನದಿಂದ ನಾಡಗೌಡ ಬೆಂಬಲಿತ ಸದಸ್ಯ ಹುಲಗಪ್ಪ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯ ಶಿವಪ್ಪ ಅಧ್ಯಕ್ಷ ಮತ್ತು ಉಪಾಧ್ಯಕ್ಷಕ್ಕೆ ಚುನಾವಣೆ ನೆಡೆಯಿತು.
ಕಾಳಾಪೂರ ಗ್ರಾಪಂ ಒಟ್ಟು ಸದಸ್ಯರು ೨೪, ನಾಡಗೌಡರ ಬೆಂಬಲಿತ ಸದಸ್ಯರಾದ ಶಂಕ್ರಮ್ಮ ಗಂಡ ಶರಣಪ್ಪ ೧೩ ಮತಗಳ ಪಡೆದು ಅಧ್ಯಕ್ಷ ಸ್ಥಾನದಿಂದ ರೋಚಕ ಗೆಲವು ಸಾಧಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರಾದ ಹುಲಿಗೆಮ್ಮ ೯ಮತಗಳ ಪಡೆದು ಅಧ್ಯಕ್ಷ ಸ್ಥಾನದಿಂದ ಸೋತರು. ಎರಡು ಮತಗಳು ತಿರಸ್ಕರವಾದವು.
ಉಪಾಧ್ಯಕ್ಷ ಸ್ಥಾನದಿಂದ ನಾಡಗೌಡರ ಬೆಂಬಲಿತ ಸದಸ್ಯ ಹುಲಗಪ್ಪ ೧೪ ಮತಗಳು ಪಡೆದು ಜಯಶಾಲಿಯಾದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯ ಶಿವಪ್ಪ ೧೦ ಮತಗಳು ಪಡೆದು ಹೀನಾಯ ಸೋಲು ಕಂಡರು.
ಈ ವೇಳೆ ನಾಡಗೌಡರ ಬೆಂಬಲಿತ ಸದಸ್ಯರು ಪಟಾಕಿ ಸಿಡಿಸಿ ವೀಜಯತ್ಸೋವ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಅಮರೇಶ ನಾಡಗೌಡರ (ಧಣಿ), ಮಾಜಿ ಅಧ್ಯಕ್ಷ ವಿಜಯಕುಮಾರ್, ಲಾಲಪ್ಪ ರಾಠೋಡ್, ಮೌನೇಶ ಐದನಾಳ ಸೇರಿದಂತೆ ಇದ್ದರು.