ಕಾಳಸರತುಗಾಂವನಲ್ಲಿ ವೀರಭದ್ರೇಶ್ವರರ ಲಗ್ನಅಕ್ಷತೆ ಸಂಪನ್ನ

ಭಾಲ್ಕಿ:ಜ.15: ತಾಲೂಕಿನ ಗಡಿ ಗ್ರಾಮ ಕಾಳಸರತುಗಾಂವನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕರ ಸಂಕ್ರಾಂತಿಯಂದು ಶರಭವತಾರಿ ವೀರಭದ್ರೇಶ್ವರದೇವರ ಲಗ್ನ ಅಕ್ಷತೆ ಕಾರ್ಯಕ್ರಮ ಶನಿವಾರರಾತ್ರಿಜರುಗಿತು.

ಕಳೆದೆರಡು ವರ್ಷಗಳಿಂದ ಕೋವಿಡ್ ಮಹಾಮಾರಿ ನಮ್ಮನ್ನು ಬೆಂಬಿಡದ ಬೇತಾಳದಂತೆ ಕಾಡುತ್ತಿದ್ದು, ದಿನೆ ದಿನೆ ಸೊಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ಮಾರ್ಗಸೂಚಿ ಅನ್ವಯ ಅತ್ಯಂತ ಸರಳ ರೀತಿಯಲ್ಲಿ ಕಾರ್ಯಕ್ರಮ ಜರುಗಿತು.

ಪ್ರತಿ ವರ್ಷದ ಸಂಕ್ರಮಣದಂದು ವೀರಭದ್ರೇಶ್ವರ ಹಾಗೂ ಮಾತೆ ಕಾಳಿಕೆ ದೇವಿಯೊಂದಿಗೆ ಲಗ್ನ ಅಕ್ಷತೆ ಜರುಗುವ ಸತ್ ಸಂಪ್ರದಾಯವಿದ್ದು, ಶುಕ್ರವಾರ ಬೆಳಿಗ್ಗೆ ವೀರಭದ್ರನಿಗೆ ರುದ್ರಾಭಿಷಕ ಜರುಗಿತು, ನಂತರ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ನಡೆದವು. ಸಂಜೆ ವೀರಭದ್ರ ಹಾಗೂ ಕಾಳಿಕಾದೇವಿಗೆ ಶೃಂಗಾರ ಹಾಗೂ ಅಲಂಕಾರ ನಡೆದು, ರಾತ್ರಿ 9.30 ಗಂಟೆ ಸುಮಾರಿಗೆ ವಿವಾಹ ಮಹೋತ್ಸವ ಸಂಪನ್ನಗೊಂಡಿತ್ತು. ಸಂಪ್ರದಾಯದಂತೆ ಸ್ಥಳಿಯ ನಿವಾಸಿ ದೇವಪ್ಪ ಪಾಂಚಾಳ ಕುಟುಂಬದವರಿಂದ ಪ್ರಸಾದ ವಿತರಣೆಜರುಗಿತು.

ಆಟ್ಟರಗಾ ಗ್ರಾಮದ ವೈದಿಕ ರಾಜುದೇವ, ಸ್ಥಳಿಯ ಶಂಕ್ರಯ್ಯ ಸ್ವಾಮಿ ಪರ್ವತಮಠ ಹಾಗೂ ಬಾಬು ಸ್ವಾಮಿ ಕಾನೊಡೆ ಲಗ್ನ ಅಕ್ಷತೆ ವಿಧಿ ವಿಧಾನ ನಡೆಸಿಕೊಟ್ಟರು, ಕುಂದನಬಾಯಿ ಶಿಂಧೆ ಹಾಗೂ ಕೌಶಲ್ಯಾ ಬಿರಾದಾರ ಲಗ್ನ ಅಕ್ಷತೆ ಶ್ಲೋಕ ಪಠಿಸಿದರು. ಗ್ರಾಮದ ಸುಮಂಗಲೆಯರ ುಆರತಿ ಬೆಳಗಿ ವಿವಾಹ ಮಹೋತ್ಸವಕ್ಕೆ ತೆರೆ ಎಳೆದರು. ನಂತರ ವೆಂಕಟರಾವ ದಾದಾರಾವ ಭಾಡಸಾಂಗವಿಕರ್ ಅವರಿಂದ ರಾತ್ರಿಯಿಡಿ ಗೋಂಧಳ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಈ ವರ್ಷ ವಿಶೇಷ ಅವ್ಹಾನಿತರಾಗಿ ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಶ್ರೀಕಾಣತ ಸ್ವಾಮಿ ಸೋಲಪೂರ, ಅಖಿಲ ಭಾರತೀಯ ವೀರಶೈವ ಮಹಾಸಭೆ ಬೆಂಗಳೂರು ನಗರ ಯುವ ಘಟಕದ ಉಪಾಧ್ಯಕ್ಷ ಕಾರ್ತಿಕ ಮಠಪತಿ, ಕರ್ನಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಸ್ಥಳಿಯ ಎಸ್.ಎಎಸ್.ಬಿ ಪ್ರೌಢಶಾಲೆಯ ಮುಖ್ಯ ಗುರು ಮಲ್ಲಿಕಾರ್ಜುನ್ ಪಾಟೀಲ, ಹಿರಿಯ ಶಿಕ್ಷಕ ಶಿವಪುತ್ರ ಮಠಪತಿ, ಪತ್ರಕರ್ತ ಪರಮೇಶ್ವರ ಬಿರಾದಾರ, ಗ್ರಾಮದ ಗಣ್ಯರಾದ ರೇವಯ್ಯ ಸ್ವಾಮಿ ಕಾನೊಡೆ, ಶಿವಣಿ ಗ್ರಾಮ್ ಪಂಚಾಯತ್ ಉಪಾಧ್ಯಕ್ಷ ಶಿವಕುಮಾರ ಬಿರಾದಾರ, ಸದಸ್ಯರಾದ ವಸಂತ ಮಾನೂರೆ, ಬಾಲಾಜಿ ಮೇತ್ರೆ, ಮಲ್ಲಿಕಾರ್ಜುನ್ ಬಿರಾದಾರ, ಶಿವಕುಮಾರ ಪಾಟೀಲ, ವಿರಶೆಟ್ಟಿ ನಾಗಾಶಂಕರೆ, ಮಹೇಶ ಬಿರಾದಾರ, ಶಿವಶಂಕರ ಬಿರಾದಾರ, ಸಚ್ಚಿದಾನಂದ ಮಠಪತಿ, ಸಿದ್ದು ಕಾನೋಡೆ ಸೇರಿದಂತೆ ಸ್ಥಳಿಯ, ಸುತ್ತಲಿನ ಗ್ರಾಮಗಳಾದ ಕಾಳಸರತುಗಾಂವ ವಾಡಿ, ಭಾಡಸಾಂಗವಿ, ಶಿವಣಿ, ಮಾಣಕೇಶ್ದರ, ಆಟ್ಟರಗಾ, ಬೋಳೆಗಾಂವ, ಆನಂದವಾಡಿ, ಇಂದ್ರಾಳ, ಲಾಸೋಣಾ ಹಾಗೂ ಇತರೆ ಗ್ರಾಮಗಳ ಸದ್ಭಕ್ತರು ಭಾಗವಹಿಸಿ ವಿವಾಹ ಮಹೋತ್ಸವ ಯಶಸ್ವಿಗೊಳಿಸಿದರು.