ಕಾಳಸಂತೆಯಲ್ಲಿ ಸಿಜೆಂಟ್ ಮೆಣಸಿಕಾಯಿ ಬೀಜ

 • ಕಟ್ಟೆಯೊಡೆದ ರೈತರ ಕೋಪ
 • ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ
 • ಗ್ರಾಮೀಣ ಶಾಸಕರ ಆಕ್ರೋಶ
 • ಅಧಿಕಾರಿಗಳ ಮೇಲೆ ಸಚಿವರ ರೋಷ
 • ಬಗೆಹರಿಯುವದೇ ರೈತರ ತಾಪ
  ಎನ್.ವೀರಭದ್ರಗೌಡ

  ಬಳ್ಳಾರಿ, ಜೂ.07: ಅಧಿಕ ಲಾಭ ಪಡೆಯಬಹುದಾದ ಒಣ ಮೆಣಸಿಕಾಯಿ ಬೆಳೆಗೆ ಈ ಭಾರಿಯೂ ರೈತರು ಹೆಚ್ಚಿನ ಆಧ್ಯತೆ ನೀಡುತ್ತಾ ಬಂದಿದ್ದು. ಸಿಜೆಂಟ್ ಕಂಪನಿಯ ಮೆಣಸಿನಕಾಯಿ ಬೀಜಕ್ಕಾಗಿ ರೈತರು ಪರದಾಡುತ್ತಿದ್ದಾರೆ. ಆದರೆ ಕಾಳ ಸಂತೆಯಲ್ಲಿ ಒಂದು ವರೆ ಪಟ್ಟು ಧರದಲ್ಲಿ ಮಾರಾಟ ನಡೆದಿದೆ. ಅದಕ್ಕಾಗಿ ಇಂದು ಈ ಬಗೆಗಿನ ರೈತರ ಕೋಪದ ಕಟ್ಟೆಯೊಡೆದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದಡೆ ಈ ಬಗ್ಗೆ ಗ್ರಾಮೀಣ ಶಾಸಕ ನಾಗೇಂದ್ರ ಅವರು ಸಚಿವ ಈಶ್ವರಪ್ಪ ಅವರು ಜಿಲ್ಲಾ ಪಂಚಾಯ್ತಿ ಯಲ್ಲಿ ನಡೆಸಿದ ಸಭೆಯಲ್ಲಿ ರೈತರ ಸಂಕಷ್ಟದ ಬಗ್ಗೆ ತಿಳಿಸಿ ಬೀಜ ಮಾರಾಟಗಾರರ ಹಣದ ದಾಹದ ಬಗ್ಗೆ ಆಕ್ರೋಶ ವ್ಯಕ್ತಪಿಡಿಸಿದ್ದರಿಂದ. ಸಭೆಯಲ್ಲಿದ್ದ ಈ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳನ್ನು ಸಚಿವ ಸಭೆಯಿಂದ ಹೊರ ಕಳಿಸಿದ ಘಟನೆ ನಡೆದಿದೆ.
  ರಾಜ್ಯದಲ್ಲಿ ಅತಿ ಹೆಚ್ಚು ಒಣ ಮೆಣಸಿಕಾಯಿ ಬೆಳೆಯುವ ಜಿಲ್ಲೆಗಳಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯೂ ಒಂದಾಗಿದೆ. ಇಲ್ಲಿ ಈ ಮೊದಲು ಹತ್ತಿ ಹೆಚ್ಚಾಗಿ ಬೆಳಯುತ್ತಿತ್ತು, ಕಳೆದ ಮೂರು ದಶಕಗಳಿಂದೀಚೆಗೆ ಒಣ ಮೆಣಸಿನಕಾಯಿ ಬೆಳೆಯ ಕಡೆ ರೈತರ ಇಚ್ಚಾಶಕ್ತಿ ಹೆಚ್ಚಾಗಿದೆ. ಇದಕ್ಕೆ ಇದರಲ್ಲಿ ಹೆಚ್ಚಾಗಿ ಲಾಭ ಪಡೆಯುತ್ತಿರುವುದು. ಹಾಗಂತ ಪ್ರತಿ ವರ್ಷವೂ ಲಾಭ ದೊರೆಯುತ್ತದೆಂದು ಅಲ್ಲ. ಒಂದೊಂದು ವರ್ಷ ಇದರಿಂದಾಗುವ ನಷ್ಟವೂ ಸಹ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಆದರೂ ಬಳ್ಳಾರಿ ತಾಲೂಕಿನಲ್ಲಿ ಮಾತ್ರ ತುಂಗಭದ್ರ ಹೆಚ್.ಎಲ್.ಸಿ ಕಾಲುವೆ ವ್ಯಾಪ್ತಿಯ ಬಹುತೇಕ ಮತ್ತು ಎಲ್‍ಎಲ್‍ಸಿ ಕಾಲುವೆಯ ವ್ಯಾಪ್ತಿಯಲ್ಲೂ ಈ ಬೆಳೆಗೆ ರೈತರು ಒತ್ತು ನೀಡಿದ್ದಾರೆ.
  ಕಳೆದ ವರ್ಷ ಬೆಳೇದ ಬೆಳೆಯಲ್ಲಿ ಅರ್ಧದಷ್ಟು ಫಸಲು ಸೋಂಕಿನಿಂದ ಹಾಳಾಗಿ ಅಷ್ಟೇನು ಲಾಭ ಪಡೆಯದಿದ್ದರೂ, ಹತ್ತಿ ಗಿಂತ ಇದು ಮೇಲು ಎಂದು ರೈತರು ಮಾತ್ರ ಈ ವರ್ಷವೂ ಅದಕ್ಕೆ ಮನಸ್ಸು ಮಾಡಿದ್ದಾರೆ. ಹೀಗಾಗಿ ಮೆಣಸಿನ ಕಾಯಿ ಬೀಜಕ್ಕೆ ಹೆಚ್ಚನ ಬೇಡಿಕೆ ಹೆಚ್ಚಾಗಿದೆ.
  ಕಳೆದ ವರ್ಷ ಸಿಜೆಂಟ್ ಕಂಪನಿ 5531 ಮತ್ತು 2043 ತಳಿಯ 3900 ಕಿಲೋ ಬೀಜ ಮಾರಾಟ ಮಾಡಿತ್ತು. ಆಗಲೂ ಮಾರುಕಟ್ಟೆಯಲ್ಲಿ ಬೀಜದ ಕೊರತೆ ಸೃಷ್ಠಿ ಮಾಡಿ ಹೆಚ್ಚನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದರ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು.
  ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ಬೀಜದ ಅವಶ್ಯಕತೆ ಇದೆ. ಇದನ್ನು ಅರಿತ ಮಾರಾಟಗಾರರು ಈಗಲೇ ಬೀಜದ ಕೊರತೆ ಎಂದು ಕಾಳ ಸಂತೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ. ಗರಿಷ್ಟ 88 ಸಾವಿರ ರೂಪಾಯಿ ವರೆಗೆ ಮಾರಾಟ ಮಾಡುವ 2043 ತಳಿಯ ಬೀಜವನ್ನು 1 ಲಕ್ಷ 245 ಸಾವಿರದಿಂದ 30 ಸಾವಿರದ ವರೆಗೆ ಮಾರಾಟ ಮಾಡಲಾಗುತ್ತಿದೆ. ಬಿಲ್ ಮಾತ್ರ ನಿಗಧಿತ ಧರದಲ್ಲಿ ನೀಡಲಾಗುತ್ತದೆ. ಹೆಚ್ಚಿನ ಬೆಲೆ ನೀಡದಿದ್ದರೆ ಬೀಜ ಇಲ್ಲ ಎನ್ನುತ್ತಾರೆ.
  ಇನ್ನು ಅದೇ ರೀತಿ 59 ಸಾವಿರ ರೂಗೆ ಮಾರಾಟ ಮಾಡಬೇಕಾದ 5531 ತಳಿಯ ಬೀಜವನ್ನು 80 ಸಾವಿರ ರೂಗೆ ಮಾರಾಟ ಮಾಡಲಾಗುತ್ತಿದೆ, ಈ ಬಗ್ಗೆ ಆರೋಪ ಬಂದಿದೆ.
  ಅದಕ್ಕಾಗಿ ಕೃಷಿ ಇಲಾಖೇ ಅವರು ಹಂಚಿಕೆದಾರ ಅಮೃತ್ ಆಗ್ರೋ ಎಜೆನ್ಸಿಯಿಂದಲೇ ರೈತರಿಗೆ ತಲಾ 10 ಗ್ರಾಂ ಬೀಜವನ್ನು ಜೂನ್ ಒಂದರಂದು ವಿತರಿಸಲಾಗಿತ್ತು. ಮತ್ತೆ ಜೂನ್ 7 ರಂದು ವಿತರಿಸಲಿದೆಂದು ಹೇಳಿತ್ತು.
  ಆದರೆ ಇಂದು ಹಂಚಿಕೆದಾರರು ಅಂಗಡಿಗೆ ಬೀಗ ಜಡಿದುಕೊಂಡು ಹೋಗಿದ್ದಾರೆ. ಇದರಿಂದ ವಿವಿಧ ಗ್ರಾಂಈಗಳಿಂದ ಬಂದಿದ್ದ ನೂರಾರು ರೈತರು ಆಕ್ರೋಶಗೊಂಡ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಜಿಲ್ಲಾಧಿಕಾರಿಗಳು ಜೂನ್ 15 ರೊಳಗೆ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಕಳಿಸಿದ್ದಾರೆ.
  ರೈತ ಸಂಘದ ಮುಖಂಡ ಸಂಗನಕಲ್ಲು ಕೃಷ್ಣ, ದರೂರು ಪುರುಷೋತ್ತಮಗೌಡ ಅವರು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಅವರಿಗೆ ರೈತರ ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
  ಬಂದುದು 2700 ಕಿಲೋ:
  ಜಿಲ್ಲೆಗೆ ಈ ವೆರೆಗ 2700 ಕಿಲೋ ಸಿಜೆಂಟ್ ಕಂಪನಿಯ ಬೀಜ ಬಂದಿದೆ. ಆದರೆ ಈ ಬಾರಿ ಇನ್ನೂ ಈ ಪ್ರಮಾಣದ ಬೀಜ ಬೇಕಿದೆ. ಆದರೆ ಬೀಜ ಹಂಚಿಕೆ ದಾರರ ಬಳಿ ಕೇವಲ 200 ಕಿಲೋ ಬೀಜ ಸಂಗ್ರಹ ಇದೆಯಂತೆ. ಮತ್ತೆ 400 ಕಿಲೋ ಸಧ್ಯದಲ್ಲೇ ಬರಲಿದೆ ಬಂದ ನಂತರ ರೈತರಿಗೆ ಹಂಚಲಿದೆಂದು ಕೃಷಿ ಇಲಾಖೇ ಅಧಿಕಾರಿಗಳು ಹೇಳಿ ಕಳುಹಿಸಿದ್ದಾರೆ.
  = ಹೊರಹೋಗಿ:
  ಇಂದು ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರೈತರ ಈ ಬೀಜದ ಸಮಸ್ಯೆ ಮತ್ತು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದರ ಬಗ್ಗೆ ಗ್ರಾಮೀಣ ಶಾಸಕ ನಾಗೇಂದ್ರ ಅವರು ಸಚಿವ ಈಶ್ವರಪ್ಪ ಅವರಿಗೆ ತಿಳಿಸಿದರು. ಇದರಿಂದ ಕೋಪಗೊಂಡ ಈಶ್ವರಪ್ಪ ಅವರು ಯಾರ್ರೀ ಸಂಬಂಧಿಸಿದ ಅಧಿಕಾರಿಗಳು ಏನು ಮಡ್ತೀರಿ ಎಂದು ಪ್ರಶ್ನಿಸಿ, ಮೊದಲು ನೀವು ಹೊರಗೆ ಹೋಗಿ, ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವವರ ಮೇಲೆ ಕೇಸು ಹಾಕಿ, ಬೀಜದ ಅಂಗಡಿಗಳಲ್ಲಿನ ಸ್ಟಾಕ್ ಚೆಕ್ ಮಾಡಿ ಎಂದು ಸಭೆಯಿಂದ ಕೃಷಿ ಇಲಾಖೆಯ ಜೆಡಿ ಶರಣಪ್ಪ ಮತ್ತು ತೋಟಗಾರಿಕೆ ಇಲಾಖೆಯ ಡಿಡಿ ಶರಣಪ್ಪ ಭೋಗಿ ಅವರನ್ನು ಹೊರ ಕಳಿಸಿದ ಘಟನೆ ನಡೆಯಿತು.