ಕಾಳಸಂತೆಯಲ್ಲಿ ರೆಮ್​ಡಿಸಿವಿರ್ ಮಾರಾಟ :ಇಬ್ಬರ ಬಂಧನ

ಕಲಬುರಗಿ:ಮೇ.02: ಕಾಳ ಸಂತೆಯಲ್ಲಿ ರೆಮ್‌ಡೆಸಿವಿರ್ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಡ್ರಗ್ ಕಂಟ್ರೋಲರ್ ಹಾಗೂ ಪೊಲೀಸ ಸಿಬ್ಬಂದಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ನವಜೀವನ್ ಬ್ಲಡ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಾಂತೇಶ ಮಠಪತಿ(26) ಹಾಗೂ ಸಾಜೀದ್ ಕೂಡಿ (22) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ರೆಮ್​ಡೆಸಿವಿರ್ ಅಭಾವದ ಕಾರಣ 22 ಸಾವಿರ ರೂಪಾಯಿಗೆ ಒಂದರಂತೆ ಮಾರಾಟ ಮಾಡಲು ಯತ್ನಿಸುತ್ತಿರುವಾಗ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ 5 ರೆಮ್‌ಡೆಸಿವಿರ್ ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ಅಂಶುಕುಮಾರ ತಿಳಿಸಿದ್ದಾರೆ.