ಕಾಳಸಂತೆಯಲ್ಲಿ ಐಪಿಎಲ್ ನಕಲಿ ಟಿಕೆಟ್ ಮಾರಾಟ

ಬೆಂಗಳೂರು, ಏ.೧೦- ಐಪಿಎಲ್ ಕ್ರಿಕೆಟ್ ವೀಕ್ಷಣೆ ಮಾಡಬೇಕೆಂದು ಯಾರಿಗೆ ಆಸೆಯಿಲ್ಲ ಹೇಳಿ. ಅದರಲ್ಲೂ ಹೆಚ್ಚಿನ ಜನರು ದುಬಾರಿ ಟಿಕೆಟ್ ನೀಡಿ ಕ್ರಿಕೆಟ್ ನೋಡಲು ಹೋಗುವುದಕ್ಕೆ ಹಿಂದೇಟು ಹಾಕುವ ಕೆಲ ಜನರು ಬ್ಲ್ಯಾಕ್‌ನಲ್ಲಿ ಟಿಕೆಟ್ ಪಡೆದು ನೋಡಲು ಮುಂದಾಗುತ್ತಾರೆ ಇಂತಹವರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರಲ್ಲೆ ನಕಲಿ ಟಿಕೆಟ್ ಮಾರಾಟ ದಂದೆ ಬೆಳಕಿಗೆ ಬಂದಿದೆ.
೧೬ನೇ ಆವೃತ್ತಿ ಐಪಿಎಲ್ ಕ್ರಿಕೆಟ್ ಕ್ರೇಜ್ ಜೋರಾಗಿದ್ದು, ಏಪ್ರಿಲ್ ೨ ರಂದು ಬೆಂಗಳೂರಲ್ಲಿ ನಡೆದ ಆರ್‌ಸಿಬಿ ಹಾಗೂ ಮುಂಬೈ ತಂಡಗಳ ಕ್ರಿಕೆಟ್ ಪಂದ್ಯಾವಳಿ ವೇಳೆ ಬ್ಲ್ಯಾಕ್ ಟಿಕೆಟ್ ಹೆಸರಲ್ಲಿ ಕೆಲ ಕಿಡಿಗೇಡಿಗಳು ನಕಲಿ ಟಿಕೆಟ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇವರು ಒಂದು ಅಸಲಿ ಟಿಕೆಟ್ ಅನ್ನೇ ಕಲರ್ ಪ್ರಿಂಟ್ ತೆಗೆದು ನೂರಾರು ಕ್ರಿಕೆಟ್ ಪ್ರಿಯರಿಗೆ ಮಾರಿ ವಂಚಿಸಿದ್ದಾರೆ. ಏಪ್ರಿಲ್ ೨ ರಂದು ಖುಷಿಯಿಂದ ಸ್ಟೇಡಿಯಂನತ್ತ ಹೆಜ್ಜೆ ಹಾಕಿದ ಬ್ಲ್ಯಾಕ್‌ನಲ್ಲಿ ಟಿಕೆಟ್ ಪಡೆದು ಸಿಬ್ಬಂದಿಗಳನ್ನು ತಡೆದಿದ್ದರು. ವಿಚಾರಣೆ ವೇಳೆ ಆರೋಪಿಗಳು ಒಂದ್ ಟಿಕೆಟ್ ಅನ್ನು ೨೦ ಟಿಕೆಟ್‌ಗಳ ರೀತಿ ಕಲರ್ ಪ್ರಿಂಟ್ ತೆಗೆದಿರುವುದು, ೧೨೦೦ ರೂಪಾಯಿ ಟಿಕೆಟ್ ಅನ್ನ ೩೦೦೦ ಸಾವಿರಕ್ಕೆ, ೨೫೦೦ ರೂಪಾಯಿ ಟಿಕೆಟ್ ಅನ್ನ ೫ ಸಾವಿರಕ್ಕೆ ಮಾರಾಟ ಮಾಡಿದ್ದಾರೆ ಎಂಬುವುದು ತಿಳಿದುಬಂದಿದೆ.