ಕಾಳಬೆಳಗುಂದಿ:ಬಂಡೆ ರಾಚೋಟೇಶ್ವರ ಜಾತ್ರೆತಟ್ಟೆ ಬದಲು ಬಂಡೆ ಮೇಲೆ ಊಟ ಮಾಡಿ ಹರಕೆ ಪೂರೈಸಿದ ಭಕ್ತಾದಿಗಳು

ಸೈದಾಪುರ:ಸೆ.13:ಇಲ್ಲಿಗೆ ಸಮೀಪದ ಕಾಳಬೆಳಗುಂದಿ ಗ್ರಾಮದ ಹೊರವಲಯದಲ್ಲಿ ಮಂಗಳವಾರದಂದು ಜರುಗಿದ ಶ್ರೀ ಬಂಡೆ ರಾಚೋಟೇಶ್ವರ ಜಾತ್ರೆಯಲ್ಲಿ ಭಕ್ತಾದಿಗಳು ತಟ್ಟೆಗೆ ಬದಲಿಗೆ ಬಂಡೆಯಲ್ಲಿ ಊಟ ಮಾಡಿ ಸಂಭ್ರಮಿಸಿದರು. ಹೀಗೆ ಊಟ ಮಾಡುವುದರಿಂದ ತಮಗೆ ಬಂದಿರುವ ರೋಗ ರುಜಿನಿಗಳು ಮಾಯವಾಗುತ್ತವೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ.
ಜÁತ್ರೆಗೆ ಬಂದವರು ಮನೆಯಿಂದ ತಂದ ಚಪಾತಿ, ಜೋಳದ ರೋಟ್ಟಿ, ಬದೆನೇಕಾಯಿ ಪಲ್ಯೆ, ಶೇಂಗದ ಚೇಟ್ನಿ, ಟಮೋಟ ಚೆಟ್ನಿ, ಕರ್ಚಿಕಾಯಿ, ಚಿತ್ರಾನ್ನ, ಅಪ್ಪಳ, ಹಾಗೂ ವಿಶೇಷವಾಗಿ ಪುಂಡಿಪಲ್ಯ ಪದಾರ್ಥಗಳನ್ನು ಬಂಡೆ ಮೇಲೆ ಹಾಕಿಕೊಂಡು ಎಲ್ಲರು ಒಟ್ಟಾಗಿ ಸೇರಿ ಊಟ ಮಾಡಿ ಹರಕೆ ತಿರಿಸಿದರು. ಅಲ್ಲದೆ ಮಕ್ಕಳಾಗದವರು ದೇವರ ಸನ್ನದಿಯಲ್ಲಿ ಐದು ಕಲ್ಲುಗಳಿಂದ ಚಿಕ್ಕದಾದ ಮನೆ ಕಟ್ಟಿ ಪೂಜೆ ಮಾಡುವದರಿಂದ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಎಂಬ ಅಪಾರ ನಂಬಿಕೆಯೊಂದಿಗೆ ಧಾರ್ಮಿಕ ಕಾರ್ಯಗಳನ್ನು ಕೈಗೊಂಡರು. ರಥೋತ್ಸವ ಮುಗಿದ ನಂತರ ದೇವರ ಸನ್ನಿಧಿಯ ಬಂಡೆ ಮೇಲೆ ಕುಳಿತು ಊಟ ಬಡಿಸಿಕೊಂಡು ಬಂದಂತ ಭಕ್ತರಿಗೆ ಯಾವುದೆ ಸಂಕೋಚವಿಲ್ಲದೆ ಕರೆದು ಊಟ ಬಡಿಸಿದರು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶುಭ್ರವಾದ ಕಲ್ಲು ಬಂಡೆಗಳ ಮೇಲೆ ಊಟ ಮಾಡುತ್ತಾರೆ. ಇದಕ್ಕೆ ಅದರದೆಯಾದ ಮಹತ್ವವಿದೆ. ಭಕ್ತಾದಿಗಳು ಊಟದೊಂದಿಗೆ ತಮ್ಮ ಹರಕೆ ತಿರಿಸಿಕೊಳ್ಳುತ್ತಾರೆ. ಶ್ರಾವಣ ಮಾಸದ ಪವಿತ್ರ ದಿನದಲ್ಲಿ ಈ ಜಾತ್ರೆ ನಡೆಯುತ್ತದೆ. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಇತ್ತಿಚಿಗೆ ಇದರ ಮಹತ್ವ ಹೆಚ್ಚಾಗುವಂತೆ ಮಾಡಿದೆ.
ತಾಯಪ್ಪ ಬೋಮಣ್ಣನವರು ಬಳಿಚಕ್ರ