ಕಾಳನೂರ: ಮಳೆಯಿಂದ ಕೆಸರುಗದ್ದೆಯಾದ ರಸ್ತೆಗಳು

ಕಲಬುರಗಿ,ಸೆ.14-ತಾಲೂಕಿನ ಕಾಳನೂರ ಗ್ರಾಮದಲ್ಲಿ ಮಳೆಯಿಂದಾಗಿ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಶಾಲಾ ವಿದ್ಯಾರ್ಥಿಗಳು ಮಹಿಳೆಯರು , ಹಿರಿಯರು ಕೆಸರು ರಸ್ತೆಯಲ್ಲಿಯೇ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಗ್ರಾಮದ ಕೆಲವು ರಸ್ತೆಗಳು ಹಾಳಾಗಿವೆ ಮತ್ತು ಮನೆಗಳ ಬಳಿ ಇರುವ ಸಂಧಿಗಳಲ್ಲಿ ಮಳೆಯಿಂದ ನೀರು ನಿಂತು ಕೆಸರಲ್ಲಿ ಸಾರ್ವಜನಿಕರು ಓಡಾಟಕ್ಕೆ ಕಷ್ಟ ಆಗುತ್ತಿದೆ ಜನರು ಅದೇ ಕೆಸರಲ್ಲಿ ಕಲ್ಲು ಹಾಕಿ ಅದರ ಸಹಾಯದಿಂದ ದಾಟುತ್ತಾರೆ ಒಂದು ವೇಳೆ ಅವರು ಕಾಲು ಜಾರಿ ಬಿದ್ದರೆ ಅಪಾಯ ಖಂಡಿತ ಆದ್ದರಿಂದ ಈ ಬಗ್ಗೆ ಗ್ರಾಂ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಹೇಳಿದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕಾಗಿದೆ.