
ಕಾಳಗಿ.ಮಾ.18: ತಾಲೂಕು ಮಟ್ಟದ ಜಗದ್ಗುರು ಶ್ರೀ ರೇಣುಕಾಚಾರ್ಯರ ಭವ್ಯ ಕಂಚಿನ ಮೂರ್ತಿ ಮೇರೇವಣಿಗೆ ಈ ಬಾರಿ ಅದ್ದೂರಿಯಾಗಿ ನಾಳೆ ರವಿವಾರ ಬಹುವಿಜೃಂಭಣೆಯಿಂದ ನಡೆಯಲಿದೆ ಎಂದು ಜಯಂತೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಶರಣು ಸಾಲಿಮಠ ಮೋಘಾ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಸಮಾಜದವರು ಸೇರಿಕೊಂಡು ನಡೆಸಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ದಿನಾಂಕ 19-03-2023 ರವಿವಾರ ಬೆಳ್ಳಗೆ 8 -00 ಗಂಟೆಗೆ ಕಾಳಗಿ ಪಟ್ಟಣದ ಶ್ರೀ ಬಸವೇಶ್ವರ ವೃತ ರಾಮ ನಗರದಿಂದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದವರೆಗೆ ಜಗದ್ಗುರು ಶ್ರೀ ರೇಣುಕಾಚಾರ್ಯರ ಭವ್ಯ ಕಂಚಿನ ಮೂರ್ತಿ ಮೆರವಣಿಗೆ ನಡೆಯಲಿದ್ದು. ಬೆಳ್ಳಗೆ 11-00 ಗಂಟೆಗೆ ಪಟ್ಟಣದ ಶ್ರೀ ನೀಲಕಂಠ ಕಾಳೆಶ್ವರ ಕಲ್ಯಾಣ ಮಂಟಪದಲ್ಲಿ ಬಹಿರಂಗ ಸಭೆಯಲ್ಲಿ ಶ್ರೀ ಷ.ಬ್ರ. ಚಂದ್ರಗುಂಡ ಶಿವಾಚಾರ್ಯರು, ಶ್ರೀ. ಮ.ನಿ. ಪ್ರ. ಚಿಕ್ಕ ಗುರುನಂಜೇಶ್ವರ ಶಿವಾಚಾರ್ಯರು, ಶ್ರೀ.ಷ.ಬ್ರ. ಬಸವಲಿಂಗ ಶಿವಾಚಾರ್ಯರು, ಶ್ರೀ.ಷ.ಬ್ರ.ಡಾ. ಶಾಂತಸೋಮನಾಥ ಶಿವಾಚಾರ್ಯರು, ಶ್ರೀ.ಷ.ಬ್ರ. ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಶ್ರೀ.ಷ. ಬ್ರ. ಡಾ. ಚನ್ನರುದ್ರ ಮುನಿ ಶಿವಾಚಾರ್ಯರು, ಶ್ರೀ.ಮ.ನಿ. ಪ್ರ. ಸಿದ್ದರಾಮ ಮಹಾಸ್ವಾಮಿಗಳು, ಶ್ರೀ.ಷ.ಬ್ರ. ರೇವಣಸಿದ್ಧ ಶಿವಾಚಾರ್ಯರು, ಶ್ರೀ.ಷ.ಬ್ರ. ಸಿದ್ದಲಿಂಗ ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಳಲಿದ್ದಾರೆ ಎಂದರು.
ಜಯಂತೋತ್ಸವದ ಸಮಿತಿ ಅಧ್ಯಕ್ಷ ಶಿವಕುಮಾರ ಕಮಲಾಪೂರ, ಉಪಾಧ್ಯಕ್ಷ ಶೇಖರ ಪಾಟೀಲ, ಶಿವರಾಜ ಪಾಟೀಲ ಗೋಣಗಿ, ಜಗದೀಶ ಪಾಟೀಲ, ರೇವಣಸಿದ್ಧ ಬಡಾ, ನೀಲಕಂಠ ಮಡಿವಾಳ, ರೇವಣಸಿದ್ಧ ದುತ್ತರಗಿ, ಈರಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು.