ಕಾಳಗಿ: ಭಾರಿ ಮಳೆ, ಸಿಡಿಲಿಗೆ ಎತ್ತು ಬಲಿ

ಕಾಳಗಿ. ಸೆ.23 : ತಾಲೂಕಿನಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ತೆಂಗಳಿ ಗ್ರಾಮದ ರೈತ ಫತ್ರು ತಂ.ಅಲ್ಲಾವುದ್ದಿನ ಅವರಿಗೆ ಸೇರಿದ ಒಂದು ಎತ್ತಿನ ಮೇಲೆ ಸಿಡಿಲು ಬಡಿದು ಎತ್ತು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಗಿದ ಸಮಯದಲ್ಲಿ ತುಂಬಾ ಬೆಲೆಬಾಳುವ ಎತ್ತು ಸಿಡಿಲಿಗೆ ಬಲಿಯಾದ ಕಾರಣ ರೈತ ಕಂಗಾಲಾಗಿದ್ದಾನೆ.
ಪಕ್ಕದ ಭರತನೂರ, ಮಂಗಲಗಿ, ರಾಜಾಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಮನೆಗಳು ಸಹ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತ ಗೊಂಡಿದೆ.
ಸಿಡಿಲು ಬಡಿದ ಘಟನೆ ತಿಳಿದುಕೊಂಡ ಕಾಳಗಿ ಗ್ರೇಡ್-1 ತಹಸೀಲ್ದಾರ್ ನಾಗನಾಥ ತರಗೆ ಅವರು, ಪರಿಶಿಲಿಸಿ, ತೇಂಗಳಿಯ ಬಡರೈತನಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.