ಕಾಳಗಿ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ

ಕಾಳಗಿ. ಮಾ.28: ದೇಶಾದ್ಯಂತ ಕೊರೋನಾ 2ನೇ ಅಲೆ ಸದ್ದಿಲ್ಲದೆ ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಹೋಳಿ ಹಬ್ಬವನ್ನು ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸಿಕೊಂಡು ಆನಂದಿಸಬೆಕೆಂದು ಸಿಪಿಐ ವಿನಾಯಕ ಚೌವ್ಹಾಣ್ ತಿಳಿಸಿದರು.

 ಪಟ್ಟಣದ ಪೋಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ಹೋಳಿ ಹಬ್ಬದ ನಿಮಿತ್ಯ ಹಮ್ಮಿಕೊಂಡಿರುವ ಶಾಂತಿ  ಸಭೇಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬದ ಹೆಸರಿನಲ್ಲಿ ಅಮಾಯಕರಿಗೆ ತೊಂದರೆ ನೀಡುವುದಾಗಲಿ, ಸುಲಿಗೆ ಮಾಡುವುದಾಗಲಿ, ಒತ್ತಾಯದಿಂದ ಬಣ್ಣ ಹಾಕುವುದಾಗಲಿ ಮಾಡಿದರೆ ತಕ್ಕ ಶಾಸ್ತಿ ನೀಡಲಾಗುತ್ತದೆ ಎಂದರು.
ಪಿಎಸ್ಐ ದಿವ್ಯಮಹಾದೇವ ಮಾತನಾಡಿ ಸರ್ಕಾರದ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ನಡೆಯುವುದು ನಮ್ಮೇಲ್ಲರ ಜವಾಬ್ದಾರಿ, ಯಾರಾದರೂ ಕಾನೂನು ಕೈಗೆತ್ತಿಕೊಂಡು ಹೋಳಿ ಹಬ್ಬವನ್ನು ತಮ್ಮ ಮನೆಯಲ್ಲಿ ಆಚರಣೆ ಮಾಡುವುದನ್ನು ಬಿಟ್ಟು ಪುಂಡಾಟಿಕೆ ಯಿಂದ ಸಾಮೂಹಿಕ ಆಚರಣೆ ಮಾಡಿದರೆ ಮಾರಿಹಬ್ಬ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಸಾಮಾಜೀಕ ಕಾರ್ಯಕರ್ತರ ಮ‌ಹ್ಮದ್ ಘುಡು ಸಾಬ್ ಕಮಲಾಪೂರ, ಗ್ರಾಪಂ. ಮಾಜಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ಪ್ರಶಾಂತ ಕದಂ, ರಾಘವೇಂದ್ರ ಗುತ್ತೇದಾರ, ಜಗದೀಶ ಪಾಟೀಲ, ಮಲ್ಲಿಕಾರ್ಜುನ ಮಠ, ಮಂಜುನಾಥ ಗಾಯಕವಾಡ, ಪ್ರಕಾಶ ವಂದೇಲಿ, ಪ್ರಕಾಶ ಕದಂ, ಸುನೀಲ ರಾಜಾಪುರ, ಉಮೇಶ ಬಾಂಬೆ, ಸಂಗಣ್ಣ ಬಿಜನಳ್ಳಿ, ನಾಗರಾಜ ಹಾವಗುಂಡಿ ಸೇರಿದಂತೆ ಅನೇಕರಿದ್ದರು.