ಕಾಳಗಿ ಪಟ್ಟಣ ಸಂಪೂರ್ಣ ಬಂದ್

ಕಾಳಗಿ. ಏ.24 : ಕೊರೋನಾ ನಿಯಂತ್ರಿಸುವ ಸಲುವಾಗಿ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿರುವ ಹಿನ್ನಲೆ ಶನಿವಾರ ಮತ್ತು ಭಾನುವಾರ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಸೇವೆಯನ್ನು
ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ದಿನಸಿ ಅಂಗಡಿ, ಹಾಲು, ಹಣ್ಣು ಸೇರಿ ಕೆಲವು ಅವಶ್ಯಕ ವಸ್ತುಗಳ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಬಂದ್ ಮಾಡಿಸಿದರು. ತಾಲೂಕಿನಾದಂತ್ಯ ಶನಿವಾರ ಬೆಳಿಗ್ಗೆಯಿಂದಲೇ ಇಲ್ಲಿಯ ಪಿಎಸ್ಐ ದಿವ್ಯ ಮಹಾದೇವ ಪೊಲೀಸ್ ತಂಡ ಮಿಂಚಿನ ಸಂಚಾರ ಮಾಡಿ ಗಲ್ಲಿ ಗಲ್ಲಿಗಳಲ್ಲಿ ಗಸ್ತು ಹೊಡೆದು ಪಟ್ಟಣದಲ್ಲಿ ಬಿಕೋ ಎನ್ನುವ ವಾತಾವರಣ ನಿರ್ಮಾಣಮಾಡಿದರು.