ಕಾಳಗಿ : ನೆಪ ಮಾತ್ರಕ್ಕೆ ತಾಲೂಕ ಕೇಂದ್ರ

ಕಾಳಗಿ. ಏ 1: ಕಾಳಗಿ ಪಟ್ಟಣ ಕಳೆದ 3 ವರ್ಷಗಳ ಹಿಂದೆ ನೂತನ ತಾಲೂಕು ಕೇಂದ್ರವಾಗಿ ಸರ್ಕಾರ ಉದ್ಘಾಟನೆ ಮಾಡಿದೆ. ಆದರೆ ನೆಪ ಮಾತ್ರಕ್ಕೆ ತಾಲೂಕು ಕೇಂದ್ರ ಉದ್ಘಾಟಿಸಿ ಕೈತೋಳೆದುಕೊಂಡು ಸರ್ಕಾರ ಇಲ್ಲಿ ಇದುವರೆಗೆ ಯಾವುದೇ ಸರ್ಕಾರಿ ಕಛೇರಿಗಳನ್ನು ನೂತನವಾಗಿ ಪ್ರಾರಂಭ ಮಾಡಿಲ್ಲ. ಒಂದು ತಾಲೂಕ ಕೇಂದ್ರ ಎಂದು ಕರೆಸಿಕೊಳ್ಳಬೇಕಾದರೆ ಅಲ್ಲಿ ಜನರಿಗಾಗಿ ವಿವಿಧ ಇಲಾಖೆಯ ಹತ್ತು ಹಲವಾರು ಕಚೇರಿಗಳ ಅಗತ್ಯತೆಯಿರುತ್ತದೆ. ಆದರೆ ಕಾಳಗಿ ಪಟ್ಟಣ ಮಾತ್ರ ತಾಲೂಕ
ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದು 3 ವರ್ಷ ಕಳೆದರು ಯಾವುದೇ ಕಚೇರಿಗಳು ಕಂಡಿಲ್ಲ. ಕಾಳಗಿ ತಾಲೂಕ ಕೇಂದ್ರವಾಯಿತೆಂದು ಸಂತಸಪಟ್ಟಿದ ತಾಲೂಕಿನ 77 ಹಳ್ಳಿಗಳ ಜನರು ಈಗಲೂ ತಮ್ಮ ಕೆಲಸಗಳಿಗಾಗಿ ದೂರದ ಚಿತ್ತಾಪೂರಕ್ಕೆ ಅಲೆದಾಡುವುದು ತಪ್ಪಿಲ್ಲ.

ಕಾಳಗಿಯಲ್ಲಿ ಅಗತ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳು ಪ್ರಯಾಣಿಕರ ಅನುಕೂಲಕಾಗಿ ಆದಷ್ಟು ಬೇಗನೆ ಸುಸಜ್ಜಿತ ಬಸ್ ನಿಲ್ದಾಣ ಕಟ್ಟಿಸುವುದು, ಸುಗಮ ಆಡಳಿತಕ್ಕಾಗಿ ಕೂಡಲೇ ಮಿನಿ ವಿಧಾನಸೌಧ ಕಟ್ಟಿಸುವುದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸ್ಥಾಪಿಸುವುದು, ನೋಂದಣಾಧಿಕಾರಿ ಕಚೇರಿ ಆರಂಭಿಸುವುದು, ಅಗ್ನಿಶಾಮಕ ದಳ ಕಚೇರಿ ಸ್ಥಾಪನೆ, ಸರ್ಕಾರಿ ಐಟಿಐ ಕಾಲೇಜ್ ಸ್ಥಾಪನೆ ಅತಿ ಶೀಘ್ರವಾಗಿ ಪ್ರಾರಂಭ ಮಾಡಬೇಕೆಂದು ದಲಿತ ಸೇನೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ಮೋಹನ ಚಿನ್ನ ಆಗ್ರಹಿಸಿದ್ದಾರೆ.