ಕಾಳಗಿ : ನೀಲಕಂಠ ಕಾಳೇಶ್ವರ ಜಾತ್ರೆ ರದ್ದು

ಕಾಳಗಿ. ಏ.30 : ಮೇ 4,5,6 ರಂದು ಜರುಗಬೇಕಾಗಿದ್ದ ಕಾಳಗಿ ಆರಾದ್ಯ ದೇವ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ರದ್ದುಗೊಳಿಸಲಾಗಿದೆ ಎಂದು ಗ್ರೇಡ್ -2 ತಹಶೀಲ್ದಾರ ನಾಗನಾಥ ತರಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಸರ್ಕಾರದ ಕಟ್ಟುನಿಟ್ಟಿನ ಆದೇಶ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ.
ಜಾತ್ರೆಗಿಂತ ಭಕ್ತರ ಆರೋಗ್ಯ ಮುಖ್ಯವಾಗಿದ್ದು ಮೇ 4 ರಿಂದ 6 ರವರೆಗೆ ಎಲ್ಲಾ ಭಕ್ತರು ದೇವಸ್ಥಾನಕ್ಕೆ ಬರದಂತೆ ತಮ್ಮ ತಮ್ಮ ಮನೆಯಲ್ಲಿದ್ದು ಶ್ರೀ ನೀಲಕಂಠ ಕಾಳೇಶ್ವರ ನಾಮಸ್ಮರಣೆಯೊಂದಿಗೆ ನಾಡಿಗೆ ಕಾಡುತ್ತಿರುವ ಮಹಾಮಾರಿ ಕೊರೊನಾ ತೊಲಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದರು.

ಸಿಪಿಐ ವಿನಾಯಕ ಚವ್ಹಾಣ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ, ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮಶೇಖರ ಮಾಕಪನೋರ, ಶಿವಶರಣಪ್ಪ ಗುತ್ತೇದಾರ, ಪ್ರಶಾಂತ ಕದಂ, ಜಗನ್ನಾಥ ಚಂದನಕೇರಿ, ಸಂತೋಷ ನರನಾಳ, ಬಲರಾಮ ವಲ್ಲ್ಯಾಪುರೆ, ಸುರೇಶ ಕೋರೆ, ಬಸಯ್ಯ ಸ್ವಾಮಿ ಪ್ಯಾಟಿಮಠ,ನಾಗಣ್ಣ ಟೆಂಗಳಿ, ಪಟ್ಟಣ ಪಂಚಾಯತಿ ಸಿಬ್ಬಂದಿ ದತ್ತು ಕಲಾಲ, ವಿಶಾಲ ಮೋಟಗಿ ಇದ್ದರು.