ಕಾಳಗಿ ತಾಲೂಕು ವ್ಯಾಪ್ತಿಗೆ ಗ್ರಾಮಗಳ ಸೇರ್ಪಡೆ ಕುರಿತು ಅಭಿಪ್ರಾಯ ಸಂಗ್ರಹ

ಚಿಂಚೋಳಿ,ನ.8- ಕೈಬಿಟ್ಟು ಹೋಗಿರುವ ಕೆಲ ಗ್ರಾಮಗಳನ್ನು ಕಾಳಗಿ ತಾಲೂಕು ವ್ಯಾಪ್ತಿಯಲ್ಲಿ ಸೇರಿಸುವ ಕುರಿತು ಗ್ರಾಮಗಳ ಪ್ರಮುಖರು, ರಾಜಕೀಯ ಮುಖಂಡರೊಂದಿಗೆ ಅಧಿಕಾರಿಗಳು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದರು.
ಪಟ್ಟಣದ ತಹಶೀಲ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ, ಚಿಂಚೋಳಿ ತಾಲೂಕಿನಿಂದ ಗಡಿಕೇಶ್ವರ. ರಾಯಕೋಡ. ಭೂತಪೂರ. ಚಿಂತಪಳ್ಳಿ. ರುದನೂರ. ಮತ್ತು ಹೊಡೆಬೀರನಳ್ಳಿ ಗ್ರಾಮಗಳನ್ನು ಕೈಬಿಟ್ಟು ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುತಾರೆ.
ಜಿಲ್ಲಾ ಅಧಿಕಾರಿಗಳ ಆದೇಶದಂತೆ ಚಿಂಚೋಳಿ ತಾಲೂಕಿನ ಸದರಿ ಗ್ರಾಮಗಳು ಕಾಳಗಿ ತಾಲೂಕಿಗೆ ಸೇರ್ಪಡೆಯಾಗುವ ಬಗ್ಗೆ ಸ್ಥಳೀಯ ಮುಖಂಡರು, ರಾಜಕೀಯ ಗಣ್ಯರು ಮತ್ತು ಸಾರ್ವಜನಿಕರೊಂದಿಗೆ ಈ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ಗ್ರಾಮದ ಪ್ರಮುಖರು, ವಿವಿಧ ರಾಜಕೀಯ ಮುಖಂಡರುಗಳು, ಗ್ರಾಮಸ್ಥರು ಭಾಗವಹಿಸಿದ್ದರು. ತಮ್ಮ ತಮ್ಮ ಹೇಳಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ನೇರವಾಗಿ ಲಿಖಿತ ರೂಪದಲ್ಲಿ ಸಲ್ಲಿಸಿದರು.
ಸಭೆಯಲ್ಲಿ ಕೆಲ ಗ್ರಾಮದ ಮುಖಂಡರು ಚಿಂಚೋಳಿ ತಾಲೂಕಿನಲ್ಲಿ ನಮ್ಮ ಗ್ರಾಮವನ್ನು ಉಳಿಸಿಕೊಳ್ಳಬೇಕು ಎಂದು ತಮ್ಮ ಅನಿಸಿಕೆಯನ್ನು ಮಂಡಿಸಿದರು. ಅದೇ ಗ್ರಾಮದ ಮುಖಂಡರು ಕಾಳಗಿ ತಾಲೂಕಿಗೆ ಬೇಡ ಸೇಡಂ ತಾಲೂಕಿನ ವ್ಯಾಪ್ತಿಗೆ ಸೇರಿಸಬೇಕೆಂದು ಹೇಳಿದಾಗ ತಹಸಿಲ್ದಾರ್ ಅವರು, ಮಾತನಾಡಿ ಜಿಲ್ಲಾ ಅಧಿಕಾರಿಗಳ ಆದೇಶದಂತೆ ತಾವು ನೀಡುವ ಲಿಖಿತ ದೂರುಗಳನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಚಿಂಚೋಳಿ ತಹಶಿಲ್ದಾರ ಅರುಣ್ ಕುಮಾರ ಕುಲಕರ್ಣಿ ವಹಿಸಿದ್ದರು ಈ ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲಕುಮಾರ ರಾಠೋಡ. ಶಿರಸ್ತೇದಾರ ವೆಂಕಟೇಶ ದುಗ್ಗನ. ನಿಡಗುಂದಾ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಶರಣಪ್ಪ ಮೆಡಿಕಲ. ಕೊಡ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ರಾಮಲಿಂಗರೆಡ್ಡಿ ದೇಶಮುಖ. ಮತ್ತು ಅನೇಕ ಗ್ರಾಮದ ರಾಜಕೀಯ ಮುಖಂಡರು ಭಾಗವಹಿಸಿದ್ದರು.