ಕಾಳಗಿ ತಾಲೂಕು ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ನಾಳೆ

  ಕಾಳಗಿ.ಮಾ.19. ಚಿಂಚೋಳಿ ಮತಕ್ಷೇತ್ರದ ಕಾಳಗಿ ತಾಲೂಕಿನಲ್ಲಾದ ಅಭಿವೃದ್ಧಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭವನ್ನು ಪಟ್ಟಣದ ಕೋಡ್ಲಿ ರಸ್ತೆಯ ಬಯಲು ಆವರಣದಲ್ಲಿ ಬೃಹತ್ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ ಕದಂ ತಿಳಿಸಿದ್ದಾರೆ.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗಾಗಿರುವ ಶಾಸಕ ಡಾ.ಅವಿನಾಶ ಜಾಧವ ಅವರು, ಕಾಳಗಿ ತಾಲೂಕಿನ ಸಮಗ್ರ ಅಭಿವೃದ್ಧಿಯನ್ನು ಬಯಸಿ, ತಾಲೂಕಿಗೆ 400ಕೋಟಿ ರೂ.ಗಳ 307ಕಾಮಗಾರಿಗಳನ್ನು ತರುವ ಮೂಲಕ ಈ ಭಾಗದ ಜನತೆಯ ಆಶಯಗಳನ್ನು ಅಲ್ಪ ಅವಧಿಯಲ್ಲಿಯೇ ಕಂಡರಿಯದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಕಾರಣ ಅವರ ಏಳಿಗೆಯನ್ನು ಬಯಸಿರುವ ತಾಲೂಕಿನ ಜನತೆಯ ಪರವಾಗಿ ಅಂದೇ "ಅಭಿಮಾನದ ಅಭಿನಂದನಾ" ಕಾರ್ಯಕ್ರಮವೂ ಕೂಡ ನಡೆಯಲಿದೆ ಎಂದರು.
 ಪಟ್ಟಣದಲ್ಲಿ ಶಾಸಕ ಡಾ.ಅವಿನಾಶ ಜಾಧವ ಅವರನ್ನು ರಥದಲ್ಲಿ ಭವ್ಯ ಮೇರವಣಿಗೆಯೊಂದಿಗೆ ಸಂಜೆ 4 ಘಂಟೆಗೆ ಬಹಿರಂಗ ಸಭೆ ನಡೆಯಲಿದೆ.

ಸಮಾರಂಭದಲ್ಲಿ ವಿವಿಧ ಮಠಾಧೀಶರು, ರಾಜಕೀಯ ಗಣ್ಯಮಾನ್ಯರು, ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು ಭಾಗವಹಿಸಲಿದ್ದು, ತಾಲೂಕಿನ ನಾಗರಿಕರು ಹಾಗೂ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧೀಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೋಳಿಸುವಂತೆ ವಿನಂತಿಸಿದರು.

ಚಿಂಚೋಳಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಚೆಂಗಟಿ, ಸಂತೋಷ ಪಾಟೀಲ ಮಂಗಲಗಿ, ರಾಮರಾವ ಪಾಟೀಲ ಮೋಘಾ, ರಾಜಕುಮಾರ ರಾಜಾಪೂರ, ರಮೇಶ ಕಿಟ್ಟದ, ಸಂತೋಷ ಜಾಧವ, ಸೂರ್ಯಕಾಂತ ಹಲಚೇರಿ, ಕೃಷ್ಣಾ ಸಿಂಗಶೇಟ್ಟಿ, ಪ್ರಕಾಶ ಕದಂ, ಕಾಶಿನಾಥ ರಾಜಾಪೂರ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.