ಕಾಳಗಿ; ಜಿದ್ದಾಜಿದ್ದಿನ ಪಂಚಾಯತಿ ಕದನ‌ ಶಾಂತಿಯಿಂದ ಅಂತ್ಯ

ಕಾಳಗಿ:ಡಿ.23: ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ ಮಂಗಳವಾರ 14 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯಿತು. ಕಾಳಗಿ ತಾಲ್ಲೂಕು ರಚನೆಯಾದ ಮೇಲೆ ಇದು ಮೊದಲ ಗ್ರಾಮ ಪಂಚಾಯಿತಿ ಚುನಾವಣೆಯಾಗಿದ್ದು, ಹಲವು ಸಣ್ಣಪುಟ್ಟ ಗೊಂದಲ, ಗಲಾಟೆಗಳ ಮಧ್ಯೆ ಶಾಂತಿಯುತವಾಗಿ ಮತದಾನ ನಡೆಯಿತು.

239 ಕ್ಷೇತ್ರಗಳ ಪೈಕಿ 17 ಅಭ್ಯರ್ಥಿಗಳು ಆಗಲೇ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನು ಅಂತಿಮವಾಗಿ ಕಣದಲ್ಲಿದ್ದ 222 ಸ್ಥಾನಗಳ 594 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಮತದಾರರು ಮಂಗಳವಾರ ಬೆಳಿಗ್ಗೆ 7ಗಂಟೆಯಿಂದ ಸಂಜೆ 5ಗಂಟೆವರೆಗೆ ಆಯಾ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು.

ಕೊಡದೂರ ಮತಗಟ್ಟೆ ಸಂಖ್ಯೆ 33, 33A ರಲ್ಲಿ ಮತದಾರರು ಶಾಂತತೆಯನ್ನು ಕಾಪಾಡಿಕೊಂಡು ಮತ ಚಲಸಯಿಸಿದರು. ವೃದ್ದರಿಗೆ ಹಿರಿಯ ನಾಗರಿಕರಿಗೆ ಸಹಯವು ನೀಡದೆ ಒಬ್ಬರಿಗೆ ಮಾತ್ರ ಅವಕಾಶವನ್ನು ಕಲ್ಪಿಸಿಕೊಟ್ಟರು, ಉಳಿದ ಗೋಟುರ ಪಂಚಾಯತಿ, ಹುಳಗೇರಾ ಗ್ರಾಮ ಪಂಚಾಯತಿಯಲ್ಲಿ ಅಲ್ಪ ಸ್ವಲ್ಪ ತೊಂದರೆ ತಾಗಿದ್ದು ಸ್ಥಳದಲ್ಲಿದ್ದ ಪೋಲಿಸ್ ಸಿಬ್ಬಂದಿಗಳು ತಿಳಿಗೊಳಿಸಿದರು.

ಗೋಟೂರ ಮತಗಟ್ಟೆ ಸಂಖ್ಯೆ 27ರಲ್ಲಿ ಬೆಳಿಗ್ಗೆ ಕೆಲವರು ಮಾದರಿ ನಾಮಪತ್ರ ಒಳಗಡೆ ತಂದು ನೋಡಿ ಮತದಾನ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಗಲಾಟೆ ಶುರುವಾಗಿ ಜನರು ಮತಗಟ್ಟೆ ಹಾಗೂ ಮುಖ್ಯರಸ್ತೆಗೆ ನುಗ್ಗಿದರು. ವಿಷಯ ತಿಳಿಯುತ್ತಿದ್ದಂತೆ ಕಾಳಗಿ ಪಿಎಸ್ಐ ದಿವ್ಯಾ ಶ್ರೀಶೈಲ್ ಅಂಬಾಟಿ ಧಾವಿಸಿ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮತದಾನ ಮಾಡುವುದು ನಮ್ಮ ಕಡ್ಡಾಯವಾಗಿ ಮತದಾನ ಮಾಡುಬೇಕು ಎನ್ನುವ ನಿಟ್ಟಿನಲ್ಲಿ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಪುತ್ರ ಅವಿನಾಶ್ ಜಾಧವ್ ಕುಟುಂಬ ಸಮೇತರೊಂದಿಗೆ ಆಗಮಿಸಿ ಸ್ವಗ್ರಾಮ ಬೆಡಸೂರ ಎಂ.ತಾಂಡಾದ ಮತಗಟ್ಟಗೆ ತೆರಳಿ ತಮ್ಮ ಮತ ಚಲಾಯಿದರು.

ಅದರಂತೆ ಕಾಂಗ್ರೆಸ್ ನಾಯಕ ಸುಭಾಷ್ ರಾಠೋಡ ಅವರು ಸ್ವಾಗ್ರಾಮ ಕೊಡ್ಲಿ ಗ್ರಾಮಪಂಚಾಯತ್ ಸೇರಿ ಬಡಾ‌ ಕಾಂಡದ ಮತಗಟ್ಟೆಗೆ ತೆರಳಿ ತಮ್ಮ ಮತವನ್ನು ಚಲಾಯಿಸಿದರು.

ಕಾಳಗಿ ತಾಲ್ಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಸಮಗ್ರ ಬಂದೋಬಸ್ತ್ ರೂವಾರಿ ಚಿತ್ತಾಪುರ ಸಿಪಿಐ ಕೃಷ್ಣ ಕಲ್ಲದೇವರು, ಪಿಎಸ್ಐ ದಿವ್ಯಾ ಮಹದೇವ, ಪಿಸಿ ರಾಜೆಶೇಖರ, ಮಂಜುನಾಥ, ನರಸಿಂಹ ನಂದಕುಮಾರ ಸಕಲ ಬಂದೋಬಸ್ತ್ ನೀಡಿದರು.