ಕಾಳಗಿಯಿಂದ – ಚಿಂಚೋಳಿವರೆಗೆ ಬಲಿಷ್ಠ ಭಾರತಕ್ಕಾಗಿ ಅಮೃತ ನಡಿಗೆ

ಕಾಳಗಿ.ಆ.3 : ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಬಲಿಷ್ಠ ಭಾರತಕ್ಕಾಗಿ ಅಮೃತ ನಡಿಗೆ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರಕ್ಕೆ ತ್ಯಾಗ-ಬಲಿದಾನ ಮೂಲಕ ಸ್ವತಂತ್ರ ತಂದು ಕೊಟ್ಟ ಮಹನೀಯರನ್ನು ನೆನೆಯುತ್ತ ದಿನಾಂಕ 6.8.2022 ರಿಂದ 11.8.2022 ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಶರಣು ಪಾಟೀಲ ಮೋತಕಪಳ್ಳಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್ 6 ರಂದು ಬೆಳಗ್ಗೆ ಶ್ರೀ ನೀಲಕಂಠ ಕಾಳೇಶ್ವರ ದೇವಾಲಯದಿಂದ ಅಮೃತ ನಡೆಗೆ ಚಾಲನೆ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಪ್ರಿಯಾಂಕ ಖರ್ಗೆ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಹಾಗೂ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಪಕ್ಷ ಉಸ್ತುವಾರಿಗಳು ಆಗಮಿಸುತ್ತಿದ್ದು. ಕ್ಷೇತ್ರದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು, ಪದಾಧಿಕಾರಿಗಳು,ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.

ಜಿ.ಪಂ.ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಕಾಂಗ್ರೆಸ್ ವಕ್ತಾರ ರಾಘವೇಂದ್ರ ಗುತ್ತೇದಾರ, ಅನೀಲ ಜಮಾದಾರ, ಶಿವಶರಣಪ್ಪ ಕಮಲಾಪುರ, ಜಿಯಾವುದ್ದಿನ್ ಸೌದಗಾರ್, ಜಗನ್ನಾಥ ಚಂದನಕೇರಿ, ಪರಮೇಶ್ವರ ಮಡಿವಾಳ, ಸಂತೋಷ ಪತಂಗೆ, ಪ್ರಭಾಕರ ರಟಕಲ್, ಸಂತೋಷ ನರನಾಳ, ನಾಗರಾಜ ಚಿನ್ನ, ರಾಜು ಪಂಚಾಳ, ಶಿವಕುಮಾರ ಚಿಂತಕೋಟಿ, ಅವಿನಾಶ ಗುತ್ತೇದಾರ ಇದ್ದರು.