ಕಾಳಗಿಯಲ್ಲಿ ರಕ್ತದಾನ ಶಿಬಿರ

ಕಾಳಗಿ. ಸೆ.25 : ಪಂ. ದೀನದಯಾಳ ಉಪಾಧ್ಯಯರ 105 ನೇ ಜನ್ನ ದಿನದ ಅಂಗವಾಗಿ ಕಾಳಗಿಯ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ಜನತಾ ಪಕ್ಷದ ಯುವ ಮೊರ್ಚಾದ ಅಧ್ಯಕ್ಷರಾದ ಸತೀಶರೆಡ್ಡಿ ತಾದಲಾಪೂರ ಅವರ ನೆತೃತ್ವದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಕ್ಷೇತ್ರದ ಶಾಸಕರಾದ ಡಾ. ಅವಿನಾಶ ಜಾಧವರವರು ಉದ್ಘಾಟಿಸಿ ಮಾತಾನಾಡಿದ ಅವರು ಇಂದು ಇಡೀ ಭಾರತ ದೇಶದಲ್ಲಿ ಭಾರತೀಯ ಜನ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಪಂ.ದೀನದಯಾಳ.ಉಪಾಧ್ಯರ ಜನ್ಮದಿನವನ್ನು ವಿವಿಧ ಸಮಾಜ ಸೇವೆಗಳನ್ನು ಹಮ್ಮಿಕೊಳ್ಳವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಪಂ.ದೀನದಯಾಳರು ಇಡೀ ತಮ್ಮ ಜೀವನವನ್ನೇ ಜನ ಸೇವೆಗಾಗಿ ಅರ್ಪಿಸಿದರು ಅಂತಹ ಮಹಾನ ನಾಯಕರ ಜನ್ಮದಿನವನ್ನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು.ಮುಖಂಡರು, ತಮ್ಮ ಅಲ್ಪ ಸೇವೆಯನ್ನು ಜನ ಸೇವೆಗೊಸ್ಕರ ಮಿಸಲಾಗಿಸುವುದರ ಮೂಲಕ ಅವರ ಜನ್ನದಿನ ಆಚರಣೆ ಅರ್ಥಪೂರ್ವವಾಗುತ್ತದೆ. ಇಂದಿನ ಯುವಕರು ತಮ್ಮ ಕ್ಷೇತ್ರದ ಭೂತಗಳಲ್ಲಿ ಜನಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಯುವ-ಮೊರ್ಚಾದ ಅಧ್ಯಕ್ಷರಾದ ಸತೀಶರೆಡ್ಡಿ ತಾದಲಾಪೂರ
ಪಕ್ಷದ ಪ್ರಧಾನ ಕಾರ್ಯದರ್ಶಿ ಶೇಖರ ಪಾಟೀಲ, ರೇವಣಸಿದ್ಧ ಬಡಾ, ಎಸ್ ಸಿ ಮೋರ್ಚಾ ಅಧ್ಯಕ್ಷ ಮಹೇಂದ್ರ ಪೂಜಾರಿ,
ಪಕ್ಷದ ಮುಖಂಡರಾದ ರಮೇಶ ಕಿಟ್ಟದ, ಪ್ರಶಾಂತ ಕದಂ, ವಿಷ್ಣುಕಾಂತ ಪರುತೆ,
ಪಕ್ಷದ ಜಿಲ್ಲಾ ,ರಾಜಶೇಖರ ಗುಡ್ದದ್, ಶರಣು ಚಂದ, ಶಿವು ಮುಕರಂಬಿ, ಮಂಜುನಾಥ ಟೆಂಗಳಿ, ಪೂಜಾರಿ, ಬಲರಾಮ ವಲ್ಲ್ಯಾಪುರೆ,
ಯುವ-ಮೊರ್ಚಾದ ಪದಾಧಿಕಾರಿಗಳು, ಯುವಕರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.