ಕಾಳಗಿಯಲ್ಲಿ ನಾಳೆ ಅಂಬೇಡ್ಕರ್ ಜಯಂತಿ ಆಚರಣೆ

ಕಾಳಗಿ.ಜೂ.4: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿಯನ್ನು ಜೂ.5 ರಂದು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಜಯಂತೋತ್ಸವದ ಸಮಿತಿ ಗೌರವ ಅಧ್ಯಕ್ಷರಾದ ಕಾಶಿನಾಥ ಶೇಳ್ಳಗಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 132 ನೇ ಜಯಂತೋತ್ಸವ ಸಮಿತಿ ಕಾಳಗಿ ವತಿಯಿಂದ ದಿನಾಂಕ 5.6.2023 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಮಂಟಪವರೆಗೆ ಮೇರೇವಣಿಗೆ. ಸಾಯಂಕಾಲ 4 ಗಂಟೆಗೆ ಬಹಿರಂಗ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮವನ್ನು ದಿವ್ಯ ಸಾನಿಧ್ಯವನ್ನು ಡಾ. ಜ್ಞಾನ ಪ್ರಕಾಶ ಸ್ವಾಮೀಜಿಗಳು ವಹಿಸಲಿದ್ದು. ಉದ್ಘಾಟರಾಗಿ ಡಾ. ಬಾಬಾ ಸಾಹೇಬ ರವರ ಮೊಮ್ಮಗನಾದ ಶ್ರೀ ರಾಜರತ್ನ ಅಂಬೇಡ್ಕರ್ ರವರು ಭಾಗವಹಿಸಲಿದ್ದು. ಈ ಕಾರ್ಯಕ್ರಮ ಜ್ಯೋತಿ ಬೆಳಗಿಸುವವರು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಜೀ ಭಾಗವಹಿಸಲಿದ್ದಾರೆ. ಅದೇ ರೀತಿ ಚಿಂಚೋಳಿ ಮತ ಕ್ಷೇತ್ರದ ಶಾಸಕರಾದ ಡಾ. ಅವಿನಾಶ ಜಾಧವ ಅವರು ಭಾವಚಿತ್ರ ಮಾಲಾರ್ಪಣೆ ನೆರವೇರಿಸಲಿದ್ದಾರೆ. ಕಾಳಗಿ ತಾಲೂಕಿನ ಎಲ್ಲಾ ಸಮಾಜದ ಮುಖಂಡರು, ಹಿರಿಯರು, ಯುವಕರು,ತಾಯಂದಿರು, ಚಿಂತಕರು, ಅಂಬೇಡ್ಕರ ಅನುಯಾಯಿಗಳು ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾರುತಿ ಮಳಗಿ, ಕರಣಕುಮಾರ ಕೋರವಾರ,ಕಲ್ಯಾಣರಾವ ಡೊಣ್ಣೂರ, ನಾಗರಾಜ ಬೇವಿನಕರ್, ಗುರುನಾಥ, ಬಸವರಾಜ ಮೇಲಕೇರಿ, ನಾಗೇಂದ್ರಪ್ಪ ಅಂಕನ, ಕಾಶಿನಾಥ ವಚ್ಚಾ, ಗೌತಮ್ಮ ಮಂಗಲಗಿ ಸೇರಿದಂತೆ ಅನೇಕರಿದ್ದರು.