ಕಾಳಗಿಯಲ್ಲಿ ಕಕ ಅಮೃತ ಮಹೋತ್ಸವ

ಕಾಳಗಿ :ಸೆ.17: ಇಂದು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿಂಚೋಳಿ ಮಂಡಲದ ಕಾಳಗಿ ತಾಲೂಕು ಬಿಜೆಪಿ ಕಾರ್ಯಕರ್ತರ ವತಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ನು, ಸಿಹಿ ವಿತರಣೆ ಮಾಡಲಾಯಿತು.
ಹಿಂದುಳಿದ ವರ್ಗಗಳ ಜಿಲ್ಲಾ ಕೋಶಾಧ್ಯಕ್ಷ ರಾಜಕುಮಾರ ರಾಜಾಪುರ, ಪ್ರಶಾಂತ ಕದಂ, ಮಂಜುನಾಥ ಹೆಬ್ಬಾಳ, ರಮೇಶ ಕಿಟ್ಟದ್, ವಿಷ್ಣುಕಾಂತ ಪರುತೆ.ಕಾಳಶೆಟ್ಟಿ ಪಡಶೆಟ್ಟಿ, ಕೇಶು ಚವ್ಹಾಣ, ಪ್ರಕಾಶ ಕದಂ, ಕೃಷ್ಣ ಸಿಂಗಶೆಟ್ಟಿ, ಬಾಬು ಹೀರಾಪುರ, ಮಲ್ಲು ಮರಗುತ್ತಿ, ಶ್ರೀನಿವಾಶ ಗುರುಮಿಟ್ಕಲ್, ಬಲರಾಮ ವಲ್ಲ್ಯಾಪುರ, ಸುನೀಲ ರಾಜಾಪುರ ಸೇರಿದಂತೆ ಅನೇಕರಿದ್ದರು.